ಸಂಗೀತ ಪಿತಾಮಹ ಪಿ. ಕಾಳಿಂಗರಾವ್ ನೆನಪು
ಬೆಂಗಳೂರು, ಡಿ.23: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲಾ ವತಿಯಿಂದ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಸುಗಮ ಸಂಗೀತವನ್ನು ಆಳಿದ ಅನಭಿಷಕ್ತ ದೊರೆ ಸಂಗೀತ ಪಿತಾಮಹ ಪಿ. ಕಾಳಿಂಗರಾವ್ ಅವರ ಸವಿನೆನಪಿಗಾಗಿ ಸಂಗೀತೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 26.27,28 ರಂದು ಮೂರು ದಿನಗಳ ಕಾಲ ಸಂಗೀತೋತ್ಸವ ನಡೆಯಲಿದೆ. ಇದರ ಉದ್ಘಾಟನೆಯನ್ನು ಡಿ.26 ರಂದು ಬೆಳಿಗ್ಗೆ 10 ಗಂಟೆಗೆ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಸುಗಮ ಸಂಗೀತ ತರಬೇತಿ ಏರ್ಪಡಿಸಲಾಗಿದೆ. 15 ರಿಂದ 30 ವರ್ಷ ವಯಸ್ಸಿನ ಆಸಕ್ತರು ಭಾಗವಹಿಸಿ ತರಬೇತಿ ಪಡೆಯಬಹುದಾಗಿದೆ.
ಆಸಕ್ತರು, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕನ್ನಡ ಭವನ ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ 080-22213530/243 ನ್ನು ಸಂಪರ್ಕಿಸಬಹುದಾಗಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications