ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ:ಪಾಕ್
ಇಸ್ಲಾಮಾಬಾದ್, ಡಿ. 23 : ಭಾರತ ಯುದ್ಧಕ್ಕೆ ಮುಂದಾದರೆ ಪ್ರತಿಯಾಗಿ ಸಮರ್ಥವಾಗಿ ಪ್ರತಿರೋಧ ತೋರಲು ಪಾಕಿಸ್ತಾನ ಸೇನಾಪಡೆ ಸನ್ನದ್ಧವಾಗಿದೆ ಎಂದು ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಪಾಕ್ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಾಕ್ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಿದ ಜನರಲ್ ಕಯಾನಿ, ಭಾರತದ ಬೆದರಿಕೆಗೆ ಜಗ್ಗುವ ಪ್ರಮೇಯವೇ ಇಲ್ಲ, ಪಾಕಿಸ್ತಾನದ ಸೇನಾಪಡೆ ಸಂಪೂರ್ಣ ಸನ್ನದ್ಧವಾಗಿದೆ. ಭಾರತದ ಬಗ್ಗೆ ಯಾವ ಭಯಬೇಡ ಎಂದು ಪಾಕ್ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ವೀರಯೋಧರು ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಕಯಾನಿ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಪಾಕ್ ಪ್ರಧಾನಮಂತ್ರಿ ಯಾಸೆಫ್ ರಾಜಾ ಗಿಲಾನಿ, ದೇಶದ ಜನರು ಏಕತೆಯನ್ನು ಪ್ರದರ್ಶಿಸಬೇಕು. ಭಾರತ ನಮ್ಮ ಮೇಲೆ ಯುದ್ದ ಸಾರುವ ಎಲ್ಲ ಲಕ್ಷಣಗಳೂ ಇವೆ. ಒಗ್ಗಟ್ಟಿನಿಂದ ನಾವು ಹೋರಾಡೋಣ ಎನ್ನುವ ಸಂದೇಶವನ್ನು ಕರಾಚಿಯಲ್ಲಿ ನೀಡಿದ್ದಾರೆ ಎಂದು ಪಾಕಿಸ್ತಾನ ಪ್ರಮುಖ ದೈನಿಕ ಡಾನ್ ವರದಿ ಮಾಡಿದೆ.
ಮುಂಬೈ ದಾಳಿ ಪಾಕಿಸ್ತಾನದ ಕೃಪಾಪೋಷಿತ ದಾಳಿ ಎನ್ನುವುದು ತನಿಖೆಯಿಂದ ತಿಳಿದಿದೆ. ಇದರಿಂದ ಪಾಕ್ ನಲ್ಲಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಭಾರತ ಅನೇಕ ಬಾರಿ ಮನವಿ ಮಾಡಿಕೊಂಡರು, ಪಾಕಿಗಳು ಕ್ಯಾರೇ ಎನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತದ ತಾಳ್ಮೆ ಮುಗಿದಿದೆ. ಮುಂದಿನ ಕ್ರೈಮಕೈಗೊಳ್ಳುತ್ತೇವೆ ಎಂದು ಭಾರತ ಅನೇಕ ಬಾರಿ ಪಾಕ್ ಎಚ್ಚರಿಸಿದೆ. ಒಟ್ಟಿನಲ್ಲಿ ಪಾಕ್ ಹಠಮಾರಿ ಧೋರಣಿಯಿಂದ ಇನ್ನೊಂದು ಯುದ್ಧ ಎದುರಿಸುವ ಎಲ್ಲ ಲಕ್ಷಣಗಳು ದಟ್ಟವಾಗಿವೆ. ಮುಂಬೈ ದಾಳಿಯಿಂದ ಭಾರತ ಪಾಕ್ ಸಂಬಂಧ ಸಂಪೂರ್ಣ ಹದಗೆಟ್ಟು ಹೋಗಿದೆ.
(ದಟ್ಸ್ ಕನ್ನಡ ವಾರ್ತೆ)
ಪಾಕ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ:ಪ್ರಣಬ್
ದಿಲ್ಲಿಯಲ್ಲಿ ಭಾರತೀಯ ರಾಯಭಾರಿಗಳ ಸಭೆ












Click it and Unblock the Notifications