ಲೋಕಾಯುಕ್ತ ದಾಳಿ, 16 ಕೋಟಿ ರು ವಶ
ಬೆಂಗಳೂರು, ಡಿ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳು ಸಂಪಾದಿಸಿದ್ದ ಒಟ್ಟು 16 ಕೋಟಿ ರುಪಾಯಿಗಳಿಗಿಂತ ಅಧಿಕ ಪ್ರಮಾಣದ ಹಣ, ಅಸ್ತಿ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ 10 ಅಧಿಕಾರಿಗಳ ನಿವಾಸ, ಕಚೇರಿಗಳ ದಾಳಿ ನಡೆಸಲಾಗಿದೆ.
ಬಲೆಗೆ ಬಿದ್ದ ಅಧಿಕಾರಿಗಳು ಸಾರಿಗೆ, ಪೊಲೀಸ್ ಅರಣ್ಯ, ಬಿಬಿಎಂಪಿ, ಕೆಐಡಿಬಿ ಹಾಗೂ ಕೃಷ್ಣ ಭಾಗ್ಯ ಜಲ ಮಂಡಳಿ ಇಲಾಖೆಯ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದಿನ ದಾಳಿಯಲ್ಲಿ ಅತೀ ಹೆಚ್ಚು ಅಂದರೆ ಸುಮಾರು 3 ಕೋಟಿ ಮಿಕ್ಕ ಹಣ,ಚರಾಸ್ತಿ, ಸ್ಥಿರಾಸ್ತಿಯನ್ನು ಕೆಐಡಿಬಿ ಇಂಜಿನಿಯರ್ ಸಿಎಂ ಚಂದ್ರಗೌಡ ದೊಡ್ಡ ತಿಮಿಂಗಲು ಆಗಿದೆ. ಯಲಹಂಕದ ಗ್ರಾಮ ಲೆಕ್ಕಿಗ ಎ ವೀರೇಗೌಡ ಕೂಡ 95 ಲಕ್ಷ ರುಪಾಯಿಗಳ ಒಡೆಯನಾಗಿದ್ದಾರೆ.
ಬೆಂಗಳೂರು, ಮೈಸೂರು, ಬಿಜಾಪುರ, ಮೈಸೂರು, ರಾಮನಗರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಗೊಳಗಾದ ಅಧಿಕಾರಿಗಳು ವಿವರ.
* ನಾಗಲಿಂಗಯ್ಯ, ಫುಡ್ ಇನ್ಸ್ ಪೆಕ್ಟರ್ ಬೆಂಗಳೂರು ( 93 ಲಕ್ಷ ರುಪಾಯಿಗಳು)
* ಎ ವೀರೇಗೌಡ, ಗ್ರಾಮ ಲೆಕ್ಕಿಗ ಯಲಹಂಕ (95 ಲಕ್ಷ ರುಪಾಯಿಗಳು)
* ಬಸವರಾಜ್ ಚೌಕಿಮಠ, ಸಿಪಿಐ ಬಿಜಾಪುರ (2.30 ಕೋಟಿ ರುಪಾಯಿಗಳು)
* ಚಂದ್ರಶೇಖರ್ ಚೌಹಾಣ್, ಕೆಐಡಿಬಿ ಇಂಜನಿಯರ್ (78 ಲಕ್ಷ ರುಪಾಯಿಗಳು)
* ಸಿ ಎಂ ಚಂದ್ರೇಗೌಡ, ಕೆಐಡಿಬಿ ಇಂಜಿನಿಯರ್ ( 3 ಕೋಟಿ ರುಪಾಯಿಗಳು)
* ದೇವರಾಜ್, ಬಿಬಿಎಂಪಿ ಇಂಜಿನಿಯರ್ (1.67 ಕೋಟಿ ರುಪಾಯಿಗಳು)
* ಆರ್ ಆರ್ ಪಟೇಲಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬೆಂಗಳೂರು (1.29 ಕೋಟಿ ರುಪಾಯಿಗಳು)
* ಜಯಶಂಕರ್, ಕೆಐಡಿಬಿ ಬೆಳಗಾವಿ (1.53 ಕೋಟಿ ರುಪಾಯಿಗಳು)
* ಜಯಚಂದ್ರ, ಹೇಮಾವತಿ ಯೋಜನೆ (85 ಲಕ್ಷ ರುಪಾಯಿಗಳು)
* ಶ್ರೀನಿವಾಸನ್, ಅರಣ್ಯಾಧಿಕಾರಿ ಮೈಸೂರು (1.56 ಕೋಟಿ ರುಪಾಯಿಗಳು)
(ದಟ್ಸ್ ಕನ್ನಡ ವಾರ್ತೆ)
ಲೋಕಾಯುಕ್ತ ಬಲೆಗೆ ಬಿದ್ದವು ತೋಳಗಳು












Click it and Unblock the Notifications