ನಟಿ ರಮ್ಯಾ ತಾಯಿ ಕೈ ಪರ ಪ್ರಚಾರ

ramya's mother ranjitha
ಮಂಡ್ಯ, ಡಿ. 18 : ಚಿತ್ರ ನಟಿ ರಮ್ಯ ಗೊತ್ತಲ್ಲ, ಗೊತ್ತು ಬಿಡಿ ಅಂತೀರಾ, ವಿಷಯ ಅದಲ್ಲ ಬಿಡಿ. ಅವರ ಅಮ್ಮ ರಂಜಿತಾ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮದ್ದೂರು ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಅದರಲ್ಲಿ ಏನು ವಿಶೇಷ ಅನ್ನಬಹುದು. ಆದರೆ ಮಂಡ್ಯದ ಹೈಕಳುಗಳು, ಮಗಳು ಅಲ್ಲಿ ಹಿರೋಯಿನ್, ಅಮ್ಮ ಇಲ್ಲಿ ಹಿರೋಯಿನ್ ಎಂದು ನಗಾಡ್ತಾಯಿರುವ ಸುದ್ದಿ ಬಂದಿದೆ.

ಮತದಾನದ ದಿನಾಂಕ ಸಮೀಪಸುತ್ತಿದಂತೆಯೇ ಮದ್ದೂರು ಕಣ ದಿನದಿಂದ ದಿನಕ್ಕೆ ರಂಗು ಪಡೆಯತೊಡಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಹಾಗೂ ಚುನಾವಣೆ ಹೊಣೆ ಹೊತ್ತಿರುವ ನಟಿ ರಮ್ಯಾಳ ತಾಯಿ ರಂಜಿತಾ ಮದ್ದೂರು ಕಣದಲ್ಲಿ ಭರದಿಂದ ಪ್ರಚಾರ ಮಾಡುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಪ್ರಚಾರ ಕಾರ್ಯಕ್ಕೆ ಸ್ಟಾರ್ ವ್ಯಾಲೂ ತಂದು ಕೊಡುವುದಕ್ಕಿಂತ ಸಕ್ರಿಯ ರಾಜಕಾರಣಿಯಾಗಿ ಕೆಲಸ ಮಾಡಬೇಕು. ನನ್ನು ಕೆಲಸವನ್ನು ಪಕ್ಷದ ನಾಯಕರು ಗುರುತಿಸಬೇಕು ಎನ್ನುವ ಬಯಕೆಯನ್ನು ರಂಜಿತಾ ವ್ಯಕ್ತಪಡಿಸಿದರು.

ಮೂಲತಃ ಮಂಡ್ಯದ ಕಾಳೀಕಾಂಬಾ ಬೀದಿಯ ಬೋರಯ್ಯನವರ ಪುತ್ರಿ ರಂಜಿತಾ ಅವರಿಗೆ ರಾಜಕಾರಣ ಎಂಬುದು ರಕ್ತಗತವಾಗಿ ಬಂದಿದೆ. ಅವರ ತಾತ ಆ ಕಾಲದಿಂದಲೂ ಕಾಂಗ್ರೆಸ್ ನೊಂದಿಗೆ ನಂಟು ಹೊಂದಿದ್ದಾರೆ. ನಾನು ಕೂಡ ಕಳೆದ 22 ವರ್ಷಗಳಿಂದ ಎಲೆ ಮರೆಕಾಯಿಯಂತೆ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದೇನೆ. ಇದೀಗ ಪಕ್ಷ ನನ್ನನ್ನು ಗುರುತಿಸಿದೆ. ಅದು ನನಗೆ ಸಂತಸ ಎಂದು ಅವರು ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಮಗೆ ರಾಜಕೀಯ ಮಾರ್ಗದರ್ಶಕರು. ನಾನು ಮಂಡ್ಯದವಳೆ ಎನ್ನುವ ಕಾರಣಕ್ಕಾಗಿ ಪಕ್ಷದ ಹೈಕಮಾಂಡ್, ಚುನಾವಣಾ ವೀಕ್ಷಕರ ಪಟ್ಟಿಗೆ ಸೇರಿಸಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಸೂಚಿಸಿದೆ. ನಾನು ಕೂಡ ಪ್ರೇಮಾ ಮೇಡಂ (ಎಸ್ ಎಂ ಕೃಷ್ಣ ಪತ್ನಿ) ತಂಡದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ ಎಂದು ರಂಜಿತಾ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)
ಕರ್ನಾಟಕ ಚುನಾವಣಾ ಕಣ : ಚೂರು-ಪಾರು
ದೇಶಪಾಂಡೆಗೆ ಜೆಡಿಎಸ್ ಅಭ್ಯರ್ಥಿ ಸವಾಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+