ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನಿಂದ ಲಾಡೆನ್ ಗೆ ಅಣ್ವಸ್ತ್ರ ಮಾರಾಟ?

By Staff
|
Google Oneindia Kannada News

ಇಸ್ಲಾಮಾಬಾದ್, ಡಿ.15 : ಅಮೆರಿಕದ ಮೇಲೆ ಅಲ್ ಖೈದಾ ಉಗ್ರ ಸಂಘಟನೆ ದಾಳಿಗೆ ನಡೆಸುವುದಕ್ಕೆ ಮುನ್ನ ಪಾಕಿಸ್ತಾನದ ಇಬ್ಬರು ವಿಜ್ಞಾನಿಗಳು ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಗೆ ಅಣ್ವಸ್ತ್ರ ಮಾರಾಟ ಮಾಡಲು ಮುಂದಾಗಿದ್ದರು ಎನ್ನುವ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಎಂದೇ ಖ್ಯಾತರಾಗಿರುವ ವಿಜ್ಞಾನಿ ಅಬ್ಧುಲ್ ಖಾದರ್ ಖಾನ್ ಅವರ ಕುರಿತ ಆತ್ಮಚರಿತ್ರೆ 'ದಿ ಮ್ಯಾನ್ ಫ್ರಮ್ ಪಾಕಿಸ್ತಾನ'ದಲ್ಲಿ ಬರೆಯಲಾಗಿದೆ. ಈ ಪುಸ್ತಕ ಬರೆದಿರುವ ಡಗ್ಲಾಸ್ ಫ್ರಾಂಜ್ ಹಾಗೂ ಕ್ಯಾಥರೀನ್ ಕೂಲಿನ್ಸ್ ಪ್ರಕಾರ, ಎ ಕ್ಯೂ ಖಾನ್ ಅವರ ಸಹ ಉದ್ಯೋಗಿಗಳಾದ ಚೌಧರಿ ಅಬ್ಧುಲ್ ಮಜೀದ್ ಹಾಗೂ ಸುಲ್ತಾನ್ ಬಶೀರುದ್ದೀನ್ ಇಬ್ಬರು 2001 ರ ಅಗಸ್ಟ್ ಮಧ್ಯಭಾಗದಲ್ಲಿ ಕಂದಹಾರ್ ನಲ್ಲಿ ಬಿನ್ ಲಾಡೆನ್ ಜತೆ ಮೂರು ದಿನ ಕಳೆದಿದ್ದರು.

ಲಾಡೆನ್ ಕೂಡ ಅಣ್ವಸ್ತ್ರ ಖರೀದಿಸಲು ಆಸಕ್ತಿ ಹೊಂದಿದ್ದ. ಆದರೆ ನಂತರ ಆತ ಇದ್ದಕ್ಕಿದ್ದಂತೆಯೇ ಸಂಗಡಿರೊಂದಿಗೆ ಅಪಘಾನಿಸ್ತಾನದ ವಾಯುವ್ಯ ಪ್ರಾಂತ್ಯದ ತಪ್ಪಲಿಗೆ ತೆರಳಿದ್ದರಿಂದ ವ್ಯವಹಾರ ಕುದುರಲಿಲ್ಲ ಎಂದು ಹೇಳಿದ್ದಾರೆ. ಹೋಗುವ ಮುನ್ನ ಲಾಡೆನ್ ತನ್ನ ಅನುಯಾಯಗಳಿಗೆ ಮುಂದಿನ ದಿನಗಳಲ್ಲಿ ಮಹತ್ಸಾದನೆ ಸಂಭವಿಸಲಿದೆ. ಆಗ ಜಗತ್ತಿನ ಎಲ್ಲ ಮುಸ್ಲಿಂರು ಒಂದಾಗಲಿದ್ದಾರೆ ಎಂದು ಲಾಡೆನ್ ಹೇಳಿದ್ದ. ಆ ನಂತರ ಕೆಲವೆ ದಿನಗಳಲ್ಲಿ ಅಮೆರಿದ ವಾಣಿಜ್ಯ ಕಟ್ಟಡವನ್ನು ವಿಮಾನಗಳ ಮೂಲಕ ಸ್ಫೋಟಿಸಲಾಯಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಡಗ್ಲಾಸ್ ಫ್ರಾಂಜ್ ಹಾಗೂ ಕ್ಯಾಥರೀನ್ ಕೋಲಿನ್ಸ್ ಬರೆದಿರುವ 414 ಪುಟಗಳ ಈ ಪುಸ್ತಕದಲ್ಲಿ ಅಣು ವಿಜ್ಞಾನಿಗಳು ಉಮ್ಮಾ ತಮೀರ್ ನಾಯು ಎಂಬ ಸಂಸ್ಥೆಯನ್ನು ಸ್ಫಾಪಿಸಿದ್ದರು. ಅಪಘಾನಿಸ್ತಾನದಲ್ಲಿ ಪರಿಹಾರ ಕಾಮಗಾರಿ ಹಾಗೂ ತಾಲಿಬಾನ್ ಉಗ್ರರಿಗೆ ವೈಜ್ಞಾನಿಕ ವಿಚಾರದಲ್ಲಿ ಸಲಹೆ ನೀಡುವುದು ಸಂಸ್ಥೆಯ ಕಾರ್ಯವೈಖರಿಯಾಗಿತ್ತು ಎಂದು ಬರೆದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಉಗ್ರರ ಹಸ್ತಾಂತರ ಸಾಧ್ಯವಿಲ್ಲ, ಗಿಲಾನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X