65,500 ನೌಕರಿ ಕಟ್, ಆಸ್ಕರ್ ಫರ್ನಾಂಡಿಸ್

ನವದೆಹಲಿ, ಡಿ. 15 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2008ರ ಅಗಸ್ಟ್ ನಿಂದ ಅಕ್ಟೋಬರ್ ವರೆಗೊ 65,500 ಜನರು ನೌಕರಿ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಲೋಕಸಭೆಗೆ ತಿಳಿಸಿದರು.

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಯೋಗದಿಂದ ವಂಚಿತರಾದವರ ಅಂಕಿ ಅಂಶಗಳನ್ನು ಪಡೆಯುವ ಸಲುವಾಗಿ ಕೇಂದ್ರದ ವಾಣಿಜ್ಯ ಇಲಾಖೆ ವಿವಿಧ 121 ಕಂಪನಿಗಳಲ್ಲಿ ಸರ್ವೆ ನಡೆಸಲಾಯಿತು. ಮುಖ್ಯವಾಗಿ ಜವಳಿ, ಸಿದ್ದ ಉಡುಪು ತಯಾರಿಕೆ ಕಾರ್ಖಾನೆ, ಲೆದರ್ಸ್, ಇಂಜಿನಿಯರಿಂಗ್, ಕರಕುಶಲ ವಸ್ತುಗಳ ತಯಾರಿಕೆ ಕಂಪನಿ, ಆಹಾರ ಮತ್ತು ಆಹಾರ ತಯಾರಿಕೆ ಘಟಕ, ಮಿನರಲ್ಸ್, ಮರೈನ್ ಉತ್ಪನ್ ಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಈ ಕಂಪನಿಗಳು ಸುಮಾರು 1792 ಕೋಟಿ ರುಪಾಯಿ ನಷ್ಟ ಅನುಭವಿಸಿವೆ ಎಂದು ಫರ್ನಾಂಡಿಸ್ ಲೋಕಸಭೆಗೆ ಸ್ಪಷ್ಟಪಡಿಸಿದರು.

ಆರ್ಥಿಕ ಬಿಕ್ಕಟ್ಟು ಎದುರಿಸಲು ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, 15 ದಿನಗಳಿಂದ ಅ ಉದ್ಯಮಗಳಲ್ಲಿ ಸ್ವಲ್ಪ ಚೇತರಿಕೆ ಕಂಡು ಮತ್ತೆ ಆಶಾಭಾವನೆ ಮೂಡಿದೆ ಎಂದರು. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಎಂದು ಆಸ್ಕರ್ ಫರ್ನಾಂಡಿಸ್ ಸಂಸತ್ತಿಗೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ಯಂಗ್ ಇದ್ದ ಯಾಹೂ ಯಂಗ್ ಆಗೋಯ್ತು
35 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+