ಮುಂಬೈ ಭಯೋತ್ಪಾದನೆಗೆ ಲಷ್ಕರ್ ಕಾರಣ: ಬ್ರಿಟನ್
ನವದೆಹಲಿ, ಡಿ.14: ಮುಂಬೈ ಭಯೋತ್ಪಾದನಾ ಕೃತ್ಯಕ್ಕೆ ಲಷ್ಕ ರ್ ಇ ತೋಯ್ಬಾ ಸಂಘಟನೆಯೇ ಮೂಲ ಕಾರಣ. ಈ ಬಗ್ಗೆ ಪಾಕಿಸ್ತಾನ ಕೂಡಲೇ ಕ್ರಮ ಜರುಗಿಸಬೇಕು ಎಂದು ಭಯೋತ್ಪಾದನಾ ನಿಗ್ರಹ ಕುರಿತಾದ ಮಾತುಕತೆ ನಡೆಸಲು ಆಗಮಿಸಿರುವ ಬ್ರಿಟನ್ ಪ್ರಧಾನಿ ಗೊರ್ಡನ್ ಬ್ರೌನ್ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದನೆ ಕುರಿತ ಭಾರತದ ನಿಲುವಿಗೆ ತಮ್ಮ ಸಹಮತಿ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ, ಈ ಬಗ್ಗೆ ಪಾಕಿಸ್ತಾನದ ಪ್ರಧಾನಿ ಜರ್ದಾರಿ ಅವರೊಡನೆ ಪ್ರಸ್ತಾಪಿಸುವುದಾಗಿ ಹೇಳಿದರು. ಮುಂಬೈ ಉಗ್ರರ ದಾಳಿಗೆ ಸಿಕ್ಕು ಮೃತರಾದ ಜನರಿಗಾಗಿ ಕಂಬನಿ ಮಿಡಿದ ಬ್ರೌನ್ , ಉಗ್ರರ ದಮನಕ್ಕೆ ಭಾರತಕ್ಕೆ ಬೇಕಾದ ಎಲ್ಲಾ ನೆರವನ್ನು ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ನವದೆಹಲಿಗೆ ಆಗಮಿಸಿದ ಬ್ರಿಟನ್ ಪ್ರಧಾನಿಯನ್ನು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಬರಮಾಡಿಕೊಂಡರು. ನಂ.7, ರೇಸ್ ಕೋರ್ಸ್ ರಸ್ತೆಯ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ ಜರುಗಲಿದೆ.
(ಏಜೆನ್ಸೀಸ್)
ಪುರೋಹಿತ್ ನನ್ನು ನಮಗೆ ಕೊಡಿ :ಪಾಕ್












Click it and Unblock the Notifications