ಬೆಂಗಳೂರಿನಲ್ಲಿ ಇಬ್ಬರು ಉಲ್ಫಾ ಉಗ್ರರ ಬಂಧನ
ಬೆಂಗಳೂರು, ಡಿ.13: ಮಣಿಪುರ ಮೂಲದ ಇಬ್ಬರು ಉಲ್ಫಾ ಉಗ್ರರನ್ನು ಪೀಣ್ಯಾದ ನೆಲಕದರನಹಳ್ಳಿಯ ಸಮೀಪ ಬಂಧಿಸಲಾಗಿದೆ. ಮಣಿಪುರ ಪೊಲೀಸರು ಮತ್ತು ಸೇನಾ ಗುಪ್ತಚರ ಸಿಬ್ಬಂದಿ ಯ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಇಂಫಾಲದ ಸಾರ್ಜೆಂಟ್ ಹಿಮನ್ ರಾಜು ಕುಮಾನ್ ಸಿಂಗ್ (30) ಮತ್ತು ಶಾಂಪುರದ ತೋಕಚಮ್ ರಾಜನ್ ಸಿಂಗ್(44) ಬಂಧಿತ ಉಗ್ರರು. ಈ ಗುಂಪಿನ ಪ್ರಮುಖ ಉಗ್ರ ಬೆಂಗಳೂರಿನ ಮಾಗಡಿ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ಪಡಿಸಿದ್ದಾರೆ. ಬಂಧಿತರು ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್ ಎಲ್ ಎಫ್) ಸಂಘಟನೆಗೆ ಸೇರಿದ್ದಾರೆ.
ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಹಣ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿದ್ದು ಅವರ ಹೆಸರಿನಲ್ಲಿ ಸಾಕಷ್ಟು ಹಣ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದು ಸೇರಿದಂತೆ ಜನರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ ಆರೋಪಗಳು ಇವರ ಮೇಲಿವೆ. ರಾಜನ್ ಸಿಂಗ್ ನನ್ನು 2002ರಲ್ಲಿ ವಿಲಿಟರಿ ಸಿಬ್ಬಂದಿ ಬಂಧಿಸಿದ್ದರು. ಅವರಿಂದ ತಪ್ಪಿಸಿಕೊಂಡು ಬಂದಿದ್ದ ಆತ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಬಂಧಿತ ಉಗ್ರರು ಶಸ್ತ್ರಾಸ್ತ್ರ ತರಬೇತಿಯಲ್ಲಿ ತರಬೇತಿ ಪಡೆದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications