ಎಸ್ ಎಂ ಕೃಷ್ಣ ಕೇಂದ್ರದ ಅರ್ಥ ಮಂತ್ರಿ ?

ನವದೆಹಲಿ, ಡಿ. 9 : ಇಂದು ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಆಗುವ ಸಂಭವವಿದ್ದು, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕೇಂದ್ರದ ಹಣಕಾಸು ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.

ಮುಂಬೈ ಭಯೋತ್ಪಾದನೆ ನಂತರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಸ್ಥಾನಕ್ಕೆ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದರು. ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರಿಗೆ ಗೃಹ ಖಾತೆಯ ಜವಾಬ್ದಾರಿ ವಹಿಸಲಾಗಿತ್ತು. ಖಾಲಿಯಾಗಿರುವ ಹಣಕಾಸು ಖಾತೆಗೆ ಸಮರ್ಥ ನಾಯಕರ ಹುಡುಕಾಟ ನಡೆದಿದೆ. ಈ ಹುದ್ದೆಗೆ ಕೃಷ್ಣ ಸೇರಿದಂತೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಸಿ ರಂಗರಾಜನ್, ಕಪಿಲ್ ಸಿಬಲ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ಹೆಸರುಗಳು ಚಾಲ್ತಿಯಲ್ಲಿವೆ.

ಸೋನಿಯ ಗಾಂಧಿ ಅವರ ಆಪ್ತರಾಗಿರುವ ಎಸ್ ಎಂ ಕೃಷ್ಣ ಅವರಿಗೆ ಈ ಸ್ಥಾನ ಲಭಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ರಧಾನಮಂತ್ರಿ ಹಾಗೂ ಸೋನಿಯಾ ಗಾಂಧಿ ಅವರು ಹಣಕಾಸು ಮಂತ್ರಿ ಆಯ್ಕೆಯಲ್ಲಿ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎನ್ನುವುದು ಚರ್ಚೆಯ ಪ್ರಮುಖ ವಿಷಯವಾಗಿದೆ. ಎಸ್ ಎಂ ಕೃಷ್ಣ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಕರ್ನಾಟಕದಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವ ಬಿಜೆಪಿಗೆ ತಡೆಯೊಡ್ಡಬಹುದು. ಕರ್ನಾಟಕದಲ್ಲಿ ಉಪಚುನಾವಣೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಕೃಷ್ಣ ಅವರಿಗೆ ಈ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭ ಆಗಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ಅಲ್ಲದೇ ಪಕ್ಷ ನಿಷ್ಠೆ ಜತೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ ಎನ್ನುವುದು ಹೈಕಮಾಂಡ್ ಕೃಷ್ಣ ಮೇಲೆ ಒಲವು ತೋರಿಸಲು ಕಾರಣವಾಗಿದೆ. ಮಹಾರಾಷ್ಟ್ರ ರಾಜ್ಯಪಾಲರಾಗಿ ಕೃಷ್ಣ ಕಾರ್ಯನಿರ್ವಹಣೆ ಮಾಡಿದ್ದಾರೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಕೃಷ್ಣ, ಅಮೆರಿಕದಲ್ಲಿ ಶಿಕ್ಷಣ ಪೂರೈಸಿದ್ದಾರೆ. ಕೇಂದ್ರದ ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಕೃಷ್ಣ ಅವರಿಗೆ ಕೇಂದ್ರದ ಹಣಕಾಸು ಖಾತೆಯನ್ನು ನೀಡುವ ಸಂಭವವಿದೆ.

(ದಟ್ಸ್ ಕನ್ನಡ ವಾರ್ತೆ)
ಎಸ್ಸೆಂ ಕೃಷ್ಣಗೆ 3ಹುದ್ದೆಗಳ ನೀಡಿದ ಹೈಕಮಾಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+