ಜೆಡಿಎಸ್ ಅಪ್ಪ, ಮಕ್ಕಳ, ಸೊಸೆ ಪಕ್ಷ, ಅಶೋಕ್
ಬೆಂಗಳೂರು, ಡಿ. 9 : ಜೆಡಿಎಸ್ ಪಕ್ಷ ಇದೀಗ ಅಪ್ಪ, ಮಕ್ಕಳ ಹಾಗೂ ಸೊಸೆ ಪಕ್ಷವಾಗಿ ನೂತನ ಉದಯವಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು. ಜೆಡಿಎಸ್ ನಾಯಕರ ಸ್ವಾರ್ಥದಿಂದಾಗಿ ಪಕ್ಷ ಸರ್ವನಾಶದ ಅಂಚಿಗೆ ಬಂದು ತಲುಪಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಗದಷ್ಟು ದಯನೀಯವಾದ ಮಟ್ಟಕ್ಕೆ ಇಳಿದಿದೆ ಎಂದು ಲೇವಡಿ ಮಾಡಿದ ಅಶೋಕ್, ಉಪಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಆ ಪಕ್ಷದ ಮುಖಂಡರಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಎಂಟು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಕಳೆದ ವಿಧಾನಸಭೆಯಲ್ಲಿಯೇ ಮತದಾರರ ದೂರವಿಟ್ಟಿದ್ದಾನೆ. ಅದನ್ನು ಅರಿತುಕೊಂಡು ಈ ಪಕ್ಷಗಳ ಮುಖಂಡರು ಮುಂದುವರೆಯಬೇಕು ಎಂದು ಅಶೋಕ್ ಕಿವಿ ಮಾತು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಅನಿತಾರನ್ನು ದ್ರೌಪದಿಗೆ ಹೋಲಿಕೆ ಸರಿಯಲ್ಲ












Click it and Unblock the Notifications