ಭಾರತ-ಚೀನಾ ಜಂಟಿ ಸಮರಾಭ್ಯಾಸ ಶುರು

ಡಿ.14 ರವರೆಗೂ ಈ ಸಮರಾಭ್ಯಾಸ ನಡೆಯಲಿದೆ. ಗುರುವಾರ ಸಂಜೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ 137 ಚೀನಾದ ಸೈನಿಕರನ್ನು ಮರಾಠಾ ಲಘು ಪದಾತಿ ದಳದ ಕಮಾಂಡೆಂಟ್ ಬ್ರಿಗೇಡಿಯರ್ ವಿ.ಕೆ .ಹೋಳಿ ಅವರುಸ್ವಾಗತಿಸಿದರು.
"Hand in Hand 2008." ಎಂಬ ಹೆಸರಿನಲ್ಲಿ ದ್ವಿಪಕ್ಷೀಯ ಒಪ್ಪಂದದಂತೆ ಈ ಅಭ್ಯಾಸ ಕಾರ್ಯ ಸಾಗಲಿದೆ. ಎಂದು ಚೀನಾ ಸೇನಾ ವಕ್ತಾರ ಹ್ಯೂಂಗ್ ಜೆಪಾಂಗ್ ಹೇಳಿದರು. ಜಂಟಿ ಸಮರಾಭ್ಯಾಸ ಕಾರ್ಯಕ್ರಮಕ್ಕೆ 2006 ರಲ್ಲೇ ಎರಡು ದೇಶಗಳ ನಡುವೆ ಒಪ್ಪಂದವಾಗಿತ್ತು.
ಕಳೆದ ವರ್ಷ ಚೀನಾದ ಯುನ್ನಾನ್ ಪ್ರಾಂತ್ರ್ಯದ ಕಂಮಿಂಗ್ ನಲ್ಲಿ ಮೊದಲ ಬಾರಿಗೆ ಜಂಟಿ ಸಮರಾಭ್ಯಾಸ ನಡೆಸಲಾಗಿತ್ತು. ಇದರ ಎರಡನೇ ಕಂತಿನಲ್ಲಿ ಈಗ ಮತ್ತೆ ಅಭ್ಯಾಸಕ್ಕೆ ನಾಂದಿ ಹಾಡಲಾಗಿದೆ. ಇತ್ತೀಚಿನ ಮುಂಬೈ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸಕಾರ್ಯಕ್ರಮದ ಮಹತ್ವ ಹೆಚ್ಚಿನದಾಗಿದೆ.
(ದಟ್ಸ್ ಕನ್ನಡವಾರ್ತೆ)
ಗ್ಯಾಲರಿ: ಜಂಟಿ ಸಮರಾಭ್ಯಾಸಕ್ಕೆ ಬಂದ ಚೀನಾ ಪಡೆ












Click it and Unblock the Notifications