ಪೆಟ್ರೋಲ್ ಡೀಸೆಲ್ ದರಹೊರೆ ಇಳಿಸಿದ ಕೇಂದ್ರ

ನವದೆಹಲಿ, ಡಿ. 5 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿ ಕೇಂದ್ರ ಸರ್ಕಾರ ಶುಕ್ರವಾರವೇ ಆಜ್ಞೆ ಹೊರಡಿಸಿದೆ. 22 ತಿಂಗಳಲ್ಲಿ ಪ್ರಥಮ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಆದರೆ, ಎಲ್ ಪಿಜಿ ಮತ್ತು ಸೀಮೆಎಣ್ಣೆ ಬೆಲೆಯಲ್ಲಿ ಇಳಿಕೆ ಮಾಡಿಲ್ಲ.

ಪೆಟ್ರೋಲ್ ರು. 5 ಮತ್ತು ಡೀಸೆಲ್ ರು. 2 ಕಡಿಮೆಯಾಗಲಿದೆ. ನೂತನ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಈ ಮೊದಲು ಪೆಟ್ರೋಲ್ 10 ರು., ಡೀಸೆಲ್ 5 ರು. ಮತ್ತು ಎಲ್ ಪಿಜಿ 20 ರು. ಇಳಿಸುವುದಾಗಿ ಕೇಂದ್ರ ಹೇಳಿತ್ತು. ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 57.17 ರು. ಮತ್ತು ಡೀಸೆಲ್ 39.16 ರು. ಇದೆ.

ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ಮಧ್ಯಂತರ ನಿರ್ಣಯವನ್ನು ಕೇಂದ್ರ ಪ್ರಕಟಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಪತ್ರಕರ್ತರಿಗೆ ತಿಳಿಸಿದರು.

ಜೂನ್ ತಿಂಗಳಲ್ಲಿ ಕಚ್ಚಾ ತೈಲದ ದರದಲ್ಲಿ ತೀವ್ರ ಏರಿಕೆ ಕಂಡಬಂದಿದ್ದರಿಂದ ಪೆಟ್ರೋಲ್ ಬೆಲೆಯನ್ನು 5 ರು. ಮತ್ತು ಡೀಸೆಲ್ ಬೆಲೆಯನ್ನು 3 ರು. ಹೆಚ್ಚಿಸಿತ್ತು. ಎಲ್ ಪಿಜಿ ದರವನ್ನು ಕೂಡ 50 ರು. ಏರಿಸಿತ್ತು. ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್ ಗೆ 147 ಡಾಲರ್ ಇದ್ದ ಬೆಲೆ ಈಗ 43 ಡಾಲರ್ ಗೆ ಇಳಿದಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+