ಸಿಪಿಐ(ಎಂ) ಜೊತೆ ಕೈ ಜೋಡಿಸಿದ ಜಯಲಲಿತಾ

ಚೆನ್ನೈ, ಡಿ. 5 : ಮುಂಬರುವ ಲೋಕಸಭೆ ಚುನಾವಣೆಗೆ ಎಐಎಡಿಎಂಕೆ ಹಾಗೂ ಸಿಪಿಐ(ಎಂ) ಮೈತ್ರಿ ಮಾಡಿಕೊಳ್ಳುವ ಮೂಲಕ ಭಾರಿ ಅಚ್ಚರಿ ಮೊಡಿಸಿವೆ. ಎನ್ ಡಿಎ ಜೊತೆಗೆ ಕೈಜೋಡಿಸಿದ್ದ ಜಯಲಲಿತಾ ಇಂದು ಎಡಪಕ್ಷ ಸಿಪಿಐ(ಎಂ)ದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇಂದು ಜಯಲಲಿತಾ ನಿವಾಸಕ್ಕೆ ಭೇಟಿ ನೀಡಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯವನ್ನು ಪ್ರಕಟಿಸಿದರು. ಮುಂಬರುವ ಲೋಕಸಭೆ ಚುನಾವಣೆಯ ಸಲುವಾಗಿ ಎಐಎಡಿಎಂಕೆ ಪಕ್ಷದೊಂದಿಗೆ ಸಿಪಿಐ(ಎಂ) ಹೊಂದಾಣಿಕೆ ಮಾಡಿಕೊಂಡಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಕಳೆದ ವಾರವಷ್ಟೆ ಜಯಲಲಿತಾ ಅವರು ಸಿಪಿಐ ನಾಯಕ ಎ ಬಿ ಬರ್ಧನ್ ಭೇಟಿ ಮಾತುಕತೆ ನಡೆಸಿದ್ದರು. ಇದಕ್ಕೂ ಮುಂಚೆ ಎನ್ ಡಿಎ ಸೇರ್ಪಡೆಗೊಂಡಿದ್ದ ಜಯಲಲಿತಾ, ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಎನ್ ಡಿಎ ಪರಿವಾರದ ಒಳಗೆ ಸೇರುವುದಾಗಿ ಹೇಳಿದ್ದರು. ಇದೀಗ ಲೋಕಸಭೆ ಚುನಾವಣೆಗಾಗಿ ಸಿಪಿಐ(ಎಂ) ಪಕ್ಷದೊಂದಿಗೆ ಎಐಎಡಿಎಂಕೆ ಮಾಡಿಕೊಂಡಿರುವುದು ಭಾರಿ ಚರ್ಚೆ ಗ್ರಾಸವಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+