ಮುಂಬೈ ದಾಳಿ ಬೇಹುಗಾರಿಕೆ ವೈಫಲ್ಯ, ಚಿದು
ಮುಂಬೈ, ಡಿ. 5 : ನವೆಂಬರ್ 26ರ ಮುಂಬೈ ದಾಳಿಯನ್ನು ತಡೆಯುವಲ್ಲಿ ಕೇಂದ್ರ ಬೇಹುಗಾರಿಕೆ ಇಲಾಖೆ ವಿಫಲವಾಗಿದೆ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಒಪ್ಪಿಕೊಂಡಿದ್ದಾರೆ. ಮುಂಬೈ ದಾಳಿಯಲ್ಲಿ ಅಮಾಯಕ ಜನರು ಸೇರಿದಂತೆ ಹುತಾತ್ಮರಾದ ವೀರ ಯೋಧರಿಗೆ ಅವರು ಇಂದು ಸಂತಾಪ ಸೂಚಿಸಿದರು.
ಉಗ್ರರ ದಾಳಿ ತುತ್ತಾದ ತಾಜ್ ಹೋಟೆಲ್ ಹಾಗೂ ಟ್ರೈಡೆಂಟ್ ಒಬೆರಾಯ್ ಹೋಟೆಲ್ ಗೆ ಭೇಟಿ ನೀಡಿದರು. ಘಟನೆಯಲ್ಲಿ ಗಾಯಗೊಂಡು ನಗರದ ಜೆಜೆ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಮುಂಬೈ ಘಟನೆಯಲ್ಲಿ ಜೀವದ ಹಂಗನ್ನು ತೊರೆದು ಉಗ್ರರೊಂದಿಗೆ ಸೆಣಸಾಡಿ ಕೊನೆಗೂ ಕಾರ್ಯಾಚರಣೆ ಯಶಸ್ವಿಗೊಳಿಸಿದ ಮಹಾರಾಷ್ಟ್ರ ಪೊಲೀಸ್, ಎನ್ ಎಸ್ ಜಿ ಕಮಾಂಡೋಗಳ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಮುಂದಿನ ದಿನಗಳಲ್ಲಿ ಮುಂಬೈ ದಾಳಿಯಂಥ ಘಟನೆಗಳು ಮರುಕಳಿಸದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications