ಅಶೋಕ್ ಚವಾಣ್ ಮಹಾರಾಷ್ಟ್ರ ಸಿಎಂ
ನವದೆಹಲಿ, ಡಿ. 5 : ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ನಾಂದೇಡ್ ಶಾಸಕ ಹಾಗೂ ಕೈಗಾರಿಕಾ ಸಚಿವ ಅಶೋಕ್ ಚವಾಣ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಕಳೆದ ಮೊರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಇಂದು ಕೊನೆಗೊಂಡಂತಾಗಿದೆ. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಘೋಷಿಸಿದರು.
ಈ ಮಧ್ಯೆ ನಾರಾಯಣ ರಾಣೆ ಕೂಡಾ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಚವಾಣ್ ಆಯ್ಕೆ ಮಾಡುವ ಸಮ್ಮಿತಿಸಿದ ಬೆನ್ನಲ್ಲೇ ರಾಣೆ ಬಂಡಾಯದ ಬಾವುಟ ಆರಿಸಿ ಚವಾಣ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಸಿಎಂ ಹುದ್ದೆಗೆ ಚವಾಣ್ ಸೂಕ್ತ ವ್ಯಕ್ತಿ ಅಲ್ಲ ಎಂದು ಹೇಳಿಕೆ ನೀಡಿದ್ದರು. ಬಂಡಾಯಕ್ಕೆ ಮಣಿಯದ ಹೈಕಮಾಂಡ್ ಚವಾಣ್ ಅವರನ್ನು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಎಂದು ಘೋಷಿಸಿತು.
ಮುಂಬೈ ಭಯೋತ್ಪಾದನೆ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ವಿಲಾಸ್ ರಾವ್ ದೇಶಮುಖ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರ್ ಆರ್ ಪಾಟೀಲ್ ಕೂಡಾ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಬೆಳಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಛಗನ್ ಭುಜಬಲ ಅವರನ್ನು ನೂತನ ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಎನ್ ಸಿಪಿ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.
(ದಟ್ಸ್ ಕನ್ನಡ ವಾರ್ತೆ)
ಇದನ್ನೂ ಓದಿ:
ಛಗನ್ ಭುಜಬಲ ಮಹಾರಾಷ್ಟ್ರ ಡಿಸಿಎಂ
ಅಶೋಕ್ ಚೌಹಾಣ್ ಮಹಾರಾಷ್ಟ್ರ ಸಿಎಂ ?












Click it and Unblock the Notifications