ಡೆಕ್ಕನ್ ಮುಜಾಹಿದ್ದೀನ್ ನ ಮತ್ತೊಂದು ಮುಖ
ಮುಂಬೈ, ನ.28: ಬುಧವಾರ ರಾತ್ರಿ ನಡೆದ ಮುಂಬೈ ಬಾಂಬ್ ಸ್ಫೋಟದ ಹೊಣೆಯನ್ನು ಡೆಕ್ಕನ್ ಮುಜಾಹಿದ್ದೀನ್ ಎಂಬ ಉಗ್ರವಾದಿ ಸಂಘಟನೆ ಹೊತ್ತ್ತಿದೆ. ಆದರೆ ಈ ಕೃತ್ಯದ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದು ವರ್ಷದಿಂದ ದೇಶದ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟಗಳ ಹೊಣೆಯನ್ನು ಇಂಡಿಯನ್ ಮುಜಾಹಿದ್ದ್ದೀನ್ ಹೊರುತ್ತಿದೆ. ಸುದ್ದಿ ಮೂಲಗಳ ಪ್ರಕಾರ, ತಮ್ಮ ಮುಂದಿನ ಗುರಿ ಮುಂಬೈ ಎಂದು ಸೆಪ್ಟಂಬರ್ ತಿಂಗಳಲ್ಲೇ ಇಂಡಿಯನ್ ಮುಜಾಹಿದ್ದೀನ್ ಎಚ್ಚರಿಸಿತ್ತು. ಹಾಗೆಯೇ ಮುಂಬೈನ ಭಯೋತ್ಪಾನಾ ನಿಗ್ರಹ ದಳದ ಕಾರ್ಯಾಚಟುವಟಿಕೆಗಳಬಗ್ಗೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಕಣ್ಣು ಕೆಂಪಗೆ ಮಾಡಿಕೊಂಡಿತ್ತು.
ಬುಧವಾರ ನಡೆದ ಸ್ಫೋಟದಲ್ಲಿ ಪಾಕಿಸ್ತಾನ ಮೂಲದ ಐಎಸ್ ಐ ಅಥವಾ ಲಷ್ಕರ್ ಇ ತೋಯ್ಬಾ ಉಗ್ರವಾದ ಸಂಘಟನೆಗಳ ಕೈವಾಡ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಅಧ್ಯಕ್ಷರಾಗಿ ಆಸೀಫ್ ಆಲಿ ಜರ್ದಾರಿ ಆಯ್ಕೆಯಾದ ನಂತರ ಲಷ್ಕರ್ ಇ ತೋಯ್ಬಾ ಕಾರ್ಯಾಚರಣೆಗಳು ಬರೀ ಕಾಶ್ಮೀರಕ್ಕೆ ಮಾತ್ರ ಸೀಮಿತವಾದವು. ಹಾಗಾಗಿ ಈ ಕೃತ್ಯದಲ್ಲಿ ಇಂಡಿಯನ್ ಮುಜಾಹಿದ್ದೀನ್ ಅಲ್ಲದೆ ಮತ್ತಿನ್ಯಾರ ಕೈವಾಡವೂ ಇಲ್ಲ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸುತ್ತಾರೆ.
(ಏಜೆನ್ಸೀಸ್)












Click it and Unblock the Notifications