ನೌಕಾಪಡೆ ವಶಕ್ಕೆ ಭಯೋತ್ಪಾದಕರ ಹಡಗು
ಗಾಂಧಿನಗರ, ನ. 28 : ಮುಂಬೈ ನಲ್ಲಿ ನಡೆದ ದುಷ್ಕೃತ್ಯಗಳಿಗೆ ಭಯೋತ್ಪಾದಕರನ್ನು ಕರಾಚಿಯಿಂದ ಮುಂಬೈಗೆ ಕರೆತರಲಾಗಿದೆ ಎನ್ನಲಾಗುವ ಎಂಯು ಅಲ್ಫಾ ಎಂಬ ಹೆಸರಿನ ಹಡಗನ್ನು ಮುಂಬೈನಿಂದ 112 ಕಿಲೋ ಮೀಟರ್ ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಸೆರೆ ಹಿಡಿದಿದೆ. ಹಡಗಿನಲ್ಲಿರುವ ವ್ಯಕ್ತಿಗಳನ್ನು ಹುಡುಕುವ ಪ್ರಯತ್ನ ಮುಂದುವರೆದಿದೆ.
ಅರಬ್ಬೀ ಸಮುದ್ರದಲ್ಲಿ ಚಲಿಸುವ ಎಲ್ಲ ಬೋಟ್ ಮತ್ತು ಹಡಗುಗಳನ್ನೂ ತೀವ್ರ ತಪಾಸಣೆಗೆ ಗುರಿಪಡಿಸಲಾಗುತ್ತಿದೆ ಎಂದು ವೈಸ್ ಅಡ್ಮಿರಲ್ ಬೇಡಿ ತಿಳಿಸಿದ್ದಾರೆ. ಸ್ಥಳೀಯ ಮೀನುಗಾರರು ಈ ಹಿಂದೆ ಕೆಲವು ಬಾರಿ ಮಹಾರಾಷ್ಟ್ರ ಸರಕಾರಕ್ಕೆ ಸಮುದ್ರ ದಿಂದ ಬರುವ ವಲಸೆಗಾರರ ಬಗ್ಗೆ ಮಾಹಿತಿ ನೀಡಿದ್ದರೂ ಸರಕಾರ ಎಚ್ಚೆತ್ತು ಕೊಂಡಿರಲಿಲ್ಲ. ಈ ಭಾಗದಿಂದ ಬಾಂಗ್ಲಾ ದೇಶೀ ವಲಸೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications