ವಾರಕ್ಕೆ ಎಷ್ಟು ಗಂಟೆ ದುಡಿಯುತ್ತೀರಾ?

ಬೆಂಗಳೂರು, ನ. 27 : ಕಾನೂನಿನ ಪ್ರಕಾರ ದಿನಕ್ಕೆ ಎಂಟು ಗಂಟೆ ಕೆಲಸ ಮಾಡಬೇಕು. ಆದರೆ, ಕೆಲವು ಕಂಪನಿಗಳು ತಮ್ಮಿಂದ ಎಂಟಕ್ಕಿಂತ ಹೆಚ್ಚು ಗಂಟೆ ಕೆಲಸ ತೆಗೆಯುತ್ತಿರುವುದನ್ನು ಪ್ರತಿಭಟಿಸಿ ಐಟಿ ಮತ್ತು ಬಿಪಿಒ ನೌಕರರ ಒಕ್ಕೂಟ ಕಾನೂನು ಕ್ರಮಕ್ಕೆ ಮುಂದಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ನಡೆಸುವ ಕಚೇರಿಗಳಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಈ ಆಕ್ರಮವನ್ನು ಪ್ರತಿಭಟಿಸಲು ಐಟಿ ಮತ್ತು ಅದಕ್ಕೆ ಪೂರಕವಾದ ಉದ್ಯೋಗದಲ್ಲಿ ತೊಡಗಿರುವ ಕಾರ್ಮಿಕ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಸಜ್ಜಾಗಿವೆ. ಉದ್ಯೋಗಿಗಳಿಂದ ನಿಗದಿತ ಸಮಯದ ಮಿತಿಮೀರಿ ಕೆಲಸ ತೆಗೆಯುವುದು ಇಂಡಿಯನ್ ಫ್ಯಾಕ್ಟರಿ ಕಾಯಿದೆ 1948ರ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ.

ಐಟಿ ಮತ್ತು ಬಿಪಿಒ ಕ್ಷೇತ್ರದಲ್ಲಿ ಭಾರತದಲ್ಲಿ ಪ್ರಥಮವಾಗಿ ತಲೆ ಎತ್ತಿರುವ ಕಾರ್ಮಿಕ ಸಂಘಟನೆ UNITES. ಭಾರತದಲ್ಲಿ ಒಟ್ಟಾರೆ 20 ಲಕ್ಷ ಐಟಿ ಮತ್ತಿತರ ನೌಕರರಿದ್ದು ಅವರಲ್ಲಿ ಶೇಕಡ 10 ರಷ್ಟು ಕಾರ್ಮಿಕರು ಸಂಘಟನೆಗೆ ಸದಸ್ಯರಾಗಿದ್ದಾರೆಂದು ಕಾರ್ಮಿಕ ಸಂಘ ಹೇಳಿಕೊಂಡಿದೆ. ಸಂಘಕ್ಕೆ ನೊಂದಾಯಿಸಿಕೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ ಎಂದೂ ಹೇಳಿರುವ ಯೂನಿಟೀಸ್, ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದೆ.

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ನಳಿನಿ ರಾಜಗೋಪಾಲ್ ಅವರು, ( ಹೆಸರು ಬದಲಾಯಿಸಲಾಗಿದೆ) ಈ ಸಂಘಟನೆಯ ಹೆಸರನ್ನೇ ಕೇಳಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಆದರೆ, ನಳಿನಿ ಅವರ ಕಚೇರಿ ಪಕ್ಕದಲ್ಲೇ ಇರುವ ಒಂದುಬಿಪಿಒ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರಾಜೇಶ್ ಮೆಹ್ತ ( ಹೆಸರು ಬದಲಾಯಿಸಲಾಗಿದೆ)ಅವರ 'ಪ್ರಕಾರ ಇಂಥ ಒಗ್ಗಟ್ಟಿನ ಅವಶ್ಯಕತೆ ಇತ್ತು. ಸಂಘಟನೆ ಸ್ಥಾಪನೆ ಆಗಿರುವುದು ಸ್ವಾಗತ' ಎಂದು ಹೇಳಿದರು. ವಾರಕ್ಕೆ ಐದೇದಿನದ ಕೆಲಸ ನೆಪವೊಡ್ಡಿ ತಮ್ಮ ಮೇಲಧಿಕಾರಿಗಳು ಬೆಳಗ್ಗೆ 9.30 ಯಿಂದ ರಾತ್ರಿ 9.30 ರವರೆಗೂ ಕೆಲಸ ಮಾಡುವಂತೆ ಒತ್ತಾಯ ಹೇರುತ್ತಾರೆ ಎಂದು ದೂರಿದರು.

ಎಂಟುಗಂಟೆಗಿಂತ ಹೆಚ್ಚು ಕೆಲಸ ಕಿತ್ತುತ್ತಿದ್ದಾರೆ ಎಂಬ ಆರೋಪದ ಬಗೆಗೆ ಸರ್ಜಾಪುರ ರಸ್ತೆಯ ಐಟಿ ರಪ್ತು ನಿರತ ಒಂದು ಕಂಪನಿಯ ಸಿಇಒ ದಿಲೀಪ್ ಧರ್ ಅವರ ಗಮನ ಸೆಳೆದಾಗ ಅವರು ಈ ಆಪಾದನೆಯನ್ನು ಖಡಾಖಂಡಿತವಾಗಿ ಅಲ್ಲಗೆಳೆದರಲ್ಲದೆ, ok, what if we I ask them to work for two more hours, whats wrong in it? The market is melting, the nation is burning. Well, is it not the right time to work more and save the skin? ಎಂದು ಮರುಪ್ರಶ್ನೆ ಹಾಕಿದರು.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+