ಸಿಐಡಿ ವೆಬ್ ತಾಣಕ್ಕೆ ಅತಿಕ್ರಮಿಗಳ ಪ್ರವೇಶ

ನವದೆಹಲಿ, ನ.28: ಮುಂಬೈ ದಾಳಿಗೂ ಮುನ್ನ ಉಗ್ರರ ಪಡೆ ದೇಶದ ಭದ್ರತಾ ಇಲಾಖೆಗಳಲ್ಲಿ ಒಂದಾದ ಸಿಐಡಿ ವಿಭಾಗದ ವೆಬ್ ಸೈಟ್ ಗೆ ಅತಿಕ್ರಮ ಪ್ರವೇಶ ಮಾಡಿ ಮಾಹಿತಿಗಾಗಿ ಹುಡುಕಾಟ ನಡೆಸಿದ ಸುದ್ದಿ ತಡವಾಗಿ ತಿಳಿದು ಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಇಸ್ಲಾಮಿಕ್ ಮೂಲಭೂತವಾದಿಗಳ ಕೈವಾಡ ಎಂದು ಶಂಕಿಸಲಾಗಿದೆ. ಪಾಕಿಸ್ತಾನ ಮೂಲದ ಹ್ಯಾಕರ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ನ್ಯೂಸ್ ಸೈಟ್ ಹಾಗೂ ಬ್ಯಾಂಕ್ ಆಫ್ ಬರೋಡದ ವೆಬ್ ಸೈಟ್ ಗಳನ್ನು ಹಾಳುಗೆಡೆವುವ ಸಂಚು ಹಾಕಿದ್ದ ಎನ್ನಲಾಗಿದೆ.

www.cdip.gov.in ಇದು ಸಿಐಡಿ ವಿಭಾಗದ ಅಧಿಕೃತ ಅಂತರ್ಜಾಲ ತಾಣವಾಗಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಇದರಲ್ಲಿ ಅಂತಹ ಗೌಪ್ಯ ಮಾಹಿತಿಗಳೇನಿಲ್ಲ. ಆದ್ದರಿಂದ ಇಲಾಖೆಯ ಮಾಹಿತಿ ನಾಶ ಅಥವಾ ಹಾನಿ ಏನು ಸಂಭವಿಸಿಲ್ಲ. ಆದರೂ ಈ ವಿಷಯವನ್ನು ಸೈಬರ್ ಅಪರಾಧ ಇಲಾಖೆಗೆ ತಿಳಿಸಲಾಗಿದೆ. ಐಪಿ ವಿಳಾಸ ಪತ್ತೆ ಕಾರ್ಯ ಶುರುವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

“HackeD By ZombiE_KsA. You have been owned by Pakistani 133 t h 4xOrz ….. Indians script kiddies you guyz hack Paki OGRA website lol. See what i DID your ….. Indian CID? HackeD lol."" vaunts the hacker. ಎಂಬ ಸಂದೇಶ ವಷ್ಟೇ ಈ ವರೆಗೂ ಹ್ಯಾಕರ್ ನಿಂದ ಸಿಕ್ಕಿರುವುದು.

ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಜಿಪಿ ಎ ಕೆ ಖಾನ್ ಅವರ ಪ್ರಕಾರ, "ಸಿಐಡಿ ವೆಬ್ ಸೈಟ್ ಹ್ಯಾಕ್ ಆಗಿದ್ದು ನಿಜ, ಆದರೆ ಯಾವುದೇ ಇಲಾಖೆಗೆ ಹಾನಿ ಹಾಗಿಲ್ಲ ಮತ್ತು ಮಾಹಿತಿ ಸೋರಿಕೆಯಾಗಿಲ್ಲ. ಹುಡುಗಾಟಿಕೆಗೆ ಈ ಕೃತ್ಯ ಮಾಡಿರಲೂ ಬಹುದು. ಈಗಲೇ ಏನನ್ನೂ ಹೇಳಲಾಗದು. ತನಿಖೆ ಜಾರಿಯಲ್ಲಿದೆ ಎಂದು ಹೇಳಿದರು.
(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+