ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ವೇತನ ಹೆಚ್ಚಳ

ನವದೆಹಲಿ, ನ. 20 : ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿನ್ನೆಡೆಯಿಂದ ದೇಶ ಸೇರಿದಂತೆ ವಿಶ್ವದೆಲ್ಲೆಡೆ ಬೃಹತ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿರುವುದು ಒಂದೆಡೆಯಾದರೆ, ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಸಾರ್ವಜನಿಕ ವಲಯದ ಅಧಿಕಾರಿಗಳಿಗೆ ಸಿಹಿ ಸುದ್ದಿಯ ಜತೆಗೆ ಬಂಪರ್ ಉಡುಗೂರೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಶೇ. 50 ರಿಂದ 300 ವರೆಗೂ ವೇತನ ಹೆಚ್ಚಳ ಮಾಡಲಾಗಿದ್ದು, ಜನವರಿ 2007 ರಿಂದ ಜಾರಿಗೆ ಬರುವಂತೆ ಪರಿಸ್ಕರಣೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ನಿವೃತ್ತ ನ್ಯಾಯಾಧೀಶ ಜಗನ್ನಾಥ್ ರಾವ್ ಸಮಿತಿ ಆಧಾರದ ಮೇಲೆ ಕೇಂದ್ರ ಸರಕಾರ ವೇತನ ಪರಿಸ್ಕರಣೆ ಮಾಡಿದೆ. ಇದರಿಂದ ಸುಮಾರು 2.5 ಲಕ್ಷ ಅಧಿಕಾರಿಗಳು ಸೇರಿ 16 ಲಕ್ಷ ಉದ್ಯೋಗಿಗಳು ಇದರ ಪ್ರಯೋಜನೆ ಪಡೆಯಲಿದ್ದಾರೆ. ದೇಶದಲ್ಲಿ ಕೇಂದ್ರ ಸರ್ಕಾರದ ಸ್ವಾಧೀನದಲ್ಲಿರುವ 247 ಸಾರ್ವಜನಿಕ ವಲಯದ ಕಚೇರಿಗಳಿವೆ. ಅದರಲ್ಲಿ 216 ಕಚೇರಿಗಳು ಕಾರ್ಯನಿರತವಾಗಿವೆ. ರಾವ್ ಸಮಿತಿ ಆಧಾರದ ಮೇಲೆ ಎ ಪ್ಲಸ್, ಎ, ಬಿ, ಸಿ. ಡಿ ಎಂಬ ನಾಲ್ಕು ಗುಂಪುಗಳಾಗಿ ವಿಂಗಡಿಸಿ ವೇತನ ಪರಿಷ್ಕರಣೆ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+