ಮುನ್ಸಿಪಲ್ ಅಂತರ್ಜಾಲದಲ್ಲಿ ಮಕ್ಕಳ ತಾಣ

ಬೆಂಗಳೂರು, ನ.16: ಪ್ರತಿ ದಿನ ಕರ್ನಾಟಕದಲ್ಲಿ ಸುಮಾರು 5,000 ಟನ್ ಗಳಷ್ಟು ತ್ಯಾಜ್ಯ ಸೃಷ್ಟಿಯಾಗುತ್ತಿದೆ.ಇಷ್ಟೊಂದು ಪ್ರಮಾಣದ ತ್ಯಾಜ್ಯವನ್ನು ನಿರ್ವಹಿಸುವುದು ಪುರಸಭೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾರ್ವಜನಿಕರ ಸಹಾಯ, ಸಹಕಾರ ಅಗತ್ಯ ಎಂಬುದು ಪಾಲಿಕೆಯ ಇಂಗಿತ.

ತ್ಯಾಜ್ಯ ನಿರ್ವಹಣೆಯ ಅರಿವನ್ನು ಬಾಲ್ಯದಿಂದಲೇ ಮೂಡಿಸಬೇಕು.ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಅಂತರ್ಜಾಲ ತಾಣವನ್ನುಪೌರಾಡಳಿತ ನಿರ್ದೇಶನಾಲಯ ಆರಂಭಿಸಿದೆ. ಮಕ್ಕಳ ದಿನಾಚರಣೆ ಸಂಬಂಧ ಚಿಲ್ಡ್ರನ್ಸ್ ಕಾರ್ನರ್ ಎಂಬ ಅಂತರ್ಜಾಲ ತಾಣವನ್ನು ಪ್ರಾರಂಭಿಸಲಾಯಿತು.

ಮಕ್ಕಳು ಈ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟು ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ತಿಳಿದುಕೊಳ್ಳಬಹುದು. ಆನ್ ಲೈನ್ ನಲ್ಲಿ ಕ್ವಿಜ್,ಆಟಗಳು ಹಾಗೂ ಪದಬಂಧ, ಚಕ್ರಬಂಧದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪೌರಾಡಳಿತಕ್ಕೆ ಪ್ರಶ್ನೆಗಳನ್ನು ಕಳುಹಿಸಿ ಉತ್ತ್ತರ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+