ಆರ್ಟ್ ಆಫ್ ಲೀವಿಂಗ್ ಗೆ ಸ್ಫೋಟದ ಬೆದರಿಕೆ
ಬೆಂಗಳೂರು, ನ.2: ಆಧ್ಮಾತಿಕ ಗುರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಗೆ ಶನಿವಾರ ಬೆದರಿಕೆ ಪತ್ರ ಬಂದಿದೆ. ಕೇರಳದ ಕಣ್ಣೂರಿನಲ್ಲಿನ ಏಒಎಲ್ ಧ್ಯಾನ ಕೇಂದ್ರವನ್ನು ಸ್ಫೋಟಗೊಳಿಸುವ ಬೆದರಿಕೆ ಪತ್ರ ಬಂದಿರುವುದಾಗಿ ತಿಳಿದುಬಂದಿದೆ.
ಮಲೆಯಾಳಂನಲ್ಲಿರುವ ಈ ಪತ್ರ ಧ್ಯಾನ ಆರಂಭಿಸುವ ಕೆಲ ಸಮಯದ ಮುನ್ನ ಬಂದಿದೆ. ಕಣ್ಣೂರಿನ ಧ್ಯಾನ ಕೇಂದ್ರದಲ್ಲಿ ಧ್ಯಾನ ಇನ್ನಿತರ ಆಧ್ಯಾತಿಕ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಧ್ಯಾನ ಕೇಂದ್ರವನ್ನು ಸ್ಫೋಟಿಸಲಾಗುವುದು ಎಂದು ಅದರಲ್ಲಿ ಬರೆಯಲಾಗಿದೆ. ಆದರೆ ಇದನ್ನು ಬರೆದ ವ್ಯಕ್ತಿಯ ಬಗ್ಗೆ ತಿಳಿದು ಬಂದಿಲ್ಲ. ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ ಎಂದು ಎಓಎಲ್ ನ ವಕ್ತಾರರು ಹೇಳಿದರು.
ಬೆಂಗಳೂರು ಮೂಲದ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ತನ್ನ ಸುದರ್ಶನ ಕ್ರಿಯೆ ಮುಂತಾದ ಧ್ಯಾನ ಪ್ರಕ್ರಿಯೆಗಳ ಮೂಲಕ ವಿಶ್ವಖ್ಯಾತಿಯನ್ನು ಗಳಿಸಿದೆ. ರವಿಶಂಕರ್ ಗುರೂಜಿ ಅವರ ಬೋಧಿತ ಈ ಧ್ಯಾನ ಕ್ರಮಗಳು ಎಲ್ಲಾ ಬಗೆಯ ಮತ ಧರ್ಮದವರಿಗೆ ಮುಕ್ತವಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications