ಮೈಸೂರಿನಲ್ಲಿ ವಿನೂತನ ದೀಪ ಸೌಂದರ್ಯ

ಮೈಸೂರು, ಅ.23: ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಯಾವುದೇ ಲಾಭಾಪೇಕ್ಷೆ ಇಲ್ಲದ ಸಂಸ್ಥೆ ರಾಮ್ ಸನ್ಸ್ ಕಲಾ ಪ್ರತಿಷ್ಠಾನ. ತನ್ನ ಅಂಗಳದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲು ಸಿದ್ಧತೆ ನಡೆಸಿದ್ದು, ಭಾರತದ ಸಾಂಪ್ರಾದಾಯಿಕ ದೀಪಗಳ 'ದೀಪ ಸೌಂದರ್ಯ' ಎಂಬ ವಿನೂತನ ವಸ್ತು ಪ್ರದರ್ಶನವನ್ನು ಮೈಸೂರಿನಲ್ಲಿ ಏರ್ಪಡಿಸಿದೆ.

ಇತಿಹಾಸತಜ್ಞೆ ಹಾಗೂ ಶಾಸನ ತಜ್ಞೆ ವಸುಂಧರಾ ಫಿಲ್ಲೋಝಟ್ ಗುರುವಾರ ದೀಪ ಸೌಂದರ್ಯಕ್ಕೆ ಚಾಲನೆ ನೀಡಿದರು. ವಸ್ತು ಪ್ರದರ್ಶನವು ಸಾರ್ವಜನಿಕರಿಗೆ ಅ.31ರವರೆಗೆ ತೆರೆದಿರುತ್ತದೆ ಎಂದು ರಾಮ್ ಸನ್ಸ್ ಕಲಾಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ.ಸಿಂಗ್ ತಿಳಿಸಿದರು.

ದೀಪಗಳು ಪವಿತ್ರತೆಯ ಹಾಗೂ ಮಂಗಳಕರ ಸಂಕೇತಗಳು. ದೇವಸ್ಥಾನ ಹಾಗೂ ಮನೆಗಳಲ್ಲಿ ಸಾವಿರಾರು ವರ್ಷಗಳಿಂದಲೂ ದೀಪಗಳನ್ನ್ನು ಸಾಂಪ್ರಾದಾಯಿಕವಾಗಿ ಬೆಳಗಲಾಗುತ್ತಿದೆ. 'ಇಂದಿಗೂ ಸಹ ದೀಪವಿಲ್ಲದೆ ಯಾವುದೇ ಪೂಜಾವಿಧಿಗಳು ಪೂರ್ಣವಾಗುವುದಿಲ್ಲ; ದೀಪ ಬೆಳಗುವ ಮೂಲಕ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಗುತ್ತದೆ. ದೀಪ ನಾಗರೀಕತೆಯ ಸಂಕೇತ ಎಂಬುದು ಬಹಳ ಹಿಂದಿನ ನಂಬಿಕೆ' ಎಂದು ಸಿಂಗ್ ಮಾಹಿತಿ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+