ಸಿದ್ದು ಬಣಕ್ಕೆ ಸೊಪ್ಪು ಹಾಕದಿರಲು 'ಕೈ' ನಿರ್ಧಾರ ?
ಬೆಂಗಳೂರು, ಅ. 17 : ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸೀಟು ಹೊಂದಾಣಿಕೆ ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ಮೈತ್ರಿಗೆ ಅಡ್ಡಗಾಲಾಗಿರುವ ಸಿದ್ದರಾಮಯ್ಯ ಬಣಕ್ಕೆ ಸೊಪ್ಪು ಹಾಕದಿರಲು ನಿರ್ಧರಿಸಿದೆ ಎನ್ನಲಾಗಿದೆ.
ಸೀಟು ಹೊಂದಾಣಿಕೆ ಕುರಿತು ಶನಿವಾರ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ನಿರೀಕ್ಷೆಯಂತೆ ಎರಡು ಪಕ್ಷಗಳು ತಲಾ ನಾಲ್ಕು ಸೀಟುಗಳನ್ನು ಹಂಚಿಕೊಳ್ಳಲಿದ್ದು, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಸಿದ್ದು ಬಣವನ್ನು ಈ ವಿಷಯದಲ್ಲಿ ಪುರಷ್ಕರಿಸದಿರಲು ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ನಲ್ಲಿರಲಿ, ಹೊರಗಿರಲಿ ಸಿದ್ದು ಬಣದಿಂದ ಪಕ್ಷಕ್ಕೆ ಲಾಭವಾಗಿಲ್ಲ. ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಸಿದ್ದು ಬೆಂಬಲಿಗರು ಪರಾಭವಗೊಂಡಿದ್ದರು. ಅಲ್ಲದೆ, ಕಾಂಗ್ರೆಸ್ ಸೋಲಿನ ಹಿಂದೆ ಸಿದ್ದು ಬಣಗದ ಕೈವಾಡವೂ ಇದೆ ಎಂದು ಕೆಲ ಕಾಂಗ್ರೆಸ್ ಮುಖಂಡರು ಆರೋಪಿಸುತ್ತಾರೆ. ಉಪಚುನಾವಣೆಯಲ್ಲಿ ಮತ್ತೆ ಇದು ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಅದಕ್ಕೆ ಸ್ಪಷ್ಟವಾದ ಕಾರಣವೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ ಎನ್ನುವ ಅಸಮಾಧಾನಕ್ಕೆ ಮೂಲ ಕಾರಣವಾಗಿದೆ.
ಸಿದ್ದು ಬಣದ ವಿಶ್ವಾಸಕ್ಕಿಂತ ಜಾತ್ಯಾತೀತ ಶಕ್ತಿಗಳನ್ನು ಮಣಿಸುವುದು ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜೆಡಿಎಸ್ ಜೊತೆಗೆ ಕೈಜೋಡಿಸಲು ಒತ್ತು ನೀಡಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಉಪಚುನಾವಣೆ ಮೈತ್ರಿಗೆ ತೀರ್ಮಾನಿಸಿಲ್ಲ ದೇಶಪಾಂಡೆ












Click it and Unblock the Notifications