ಲೋಕಾಯುಕ್ತ ಬಲೆಗೆ ಒಂಭತ್ತು ಭ್ರಷ್ಟ ಅಧಿಕಾರಿಗಳು
ಬೆಂಗಳೂರು, ಸೆ. 11 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ,ಒಂಭತ್ತು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾರಿಗೆ, ಕೃಷಿ ಇಲಾಖೆ, ವಾಣಿಜ್ಯ ತೆರಿಗೆ, ನಗರ ಯೋಜನೆ, ಜೆಸ್ಕಾಂ ಇಲಾಖೆಯ ಏಳು ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ ದಾಖಲೆ ಪತ್ರಗಳು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಮಂಗಳೂರು, ಬೆಳಗಾವಿ, ಬೀದರ್, ಬಳ್ಳಾರಿ, ಶಿವಮೂಗ್ಗ, ತುಮಕೂರು ಸೇರಿದಂತೆ 8 ಜಿಲ್ಲೆಗಳ ಒಂಭತ್ತು ಅಧಿಕಾರಿಗಳ ನಿವಾಸದ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು. ತನಿಖೆ ಮುಂದುವರೆದಿದೆ. ದಾಳಿಗೊಳಗಾದ ಭ್ರಷ್ಟ ಅಧಿಕಾರಿಗಳ ಹೆಸರು ಇಂತಿದೆ.
*ರಾಮದಾಸ್, ಜಂಟಿ ಕೃಷಿ ಇಲಾಖೆ ನಿರ್ದೇಶಕರು, ತುಮಕೂರು,
*ತೇಜಾನಾಯಕ್, ಜೆಸ್ಕಾಂ ಅಧಿಕಾರಿ, ಬಳ್ಳಾರಿ
*ಮಂಜಪ್ಪ, ಕೃಷಿ ಇಲಾಖೆ ಶಿವಮೂಗ್ಗ
*ದಯಾನಂದ ಪೂಜಾರಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ, ಮಂಗಳೂರು
*ಗೋವಿಂದರಾಜ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ತುಮಕೂರು,
*ಜಂದ್ರಶೇಖರ್. ಬಿಬಿಎಂಪಿ ಸಹಾಯಕ ಇಂಜಿನಿಯರ್
*ಎಚ್.ಎ.ಅಬ್ದುಲ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ, ಬೀದರ್,
*ಡಿ.ಬಿ.ನಾಯಕ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಬೆಳಗಾವಿ,
*ಎಚ್.ಎ.ಹಫೀಜ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬೀದರ್
(ದಟ್ಸ್ ಕನ್ನಡ ವಾರ್ತೆ)
ಆಸ್ತಿ ವಿವರ ಸಲ್ಲಿಸಲು ನಾಲ್ವರು ಶಾಸಕರು ವಿಫಲ
ಬಿಜಾಪುರದಲ್ಲಿ ಬಸವರಾಜ್ ಎಂಬ ಬಕಾಸುರನ ಬಂಧನ
ಲಂಚ ಸ್ವೀಕರಿಸುತ್ತಿದ್ದ ಅಧೀಕ್ಷಕ, ಲೋಕಾಯುಕ್ತ ಬಲೆಗೆ












Click it and Unblock the Notifications