ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತ
ಬೆಂಗಳೂರು, ಸೆ.8: ನಗರದ ಕೆಲವು ಬಡಾವಣೆಗಳಲ್ಲಿ ಬೆಸ್ಕಾಂ ದುರಸ್ತಿ ಕಾರ್ಯ ಕೈಗೊಂಡಿರುವ ಕಾರಣ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಂದಿನಿ ಬಡಾವಣೆ, ಭುವನೇಶ್ವರಿ ನಗರ, ಇಟ್ಟಮಡು, ಕದಿರೇನಹಳ್ಳಿ, ಚಿಕ್ಕಲಸಂದ್ರ, ಹೊಸಕೆರೆ ಹಳ್ಳಿ ಹಾಗೂ ಎಜಿ ಬಡಾವಣೆಗಳಲ್ಲಿ ಸೋಮವಾರ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಣೆಯಲ್ಲಿ ತಿಳಿಸಿದೆ.
ಹಾಗೆಯೇ ಕೆಪಿಟಿಸಿಎಲ್ ದುರಸ್ತಿ ಕಾರ್ಯ ಕೈಗೊಂಡಿರುವ ಕಾರಣ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಲ್ಲೇಶ್ವರಂ, ಡಾಲರ್ಸ್ ಕಾಲೊನಿ, ಎನ್.ಎಸ್.ಹಳ್ಳಿ, ಆರ್ ಎಂ ವಿ 2ನೇ ಹಂತ, ಲೊಟ್ಟೆಗೊಲ್ಲಹಳ್ಳಿ, ವಿಪ್ರೊ, ಎಂಎಸ್ ಆರ್ ಕೈಗಾರಿಕಾ ಪ್ರದೇಶ, ಭಾರತೀಯ ವಿಜ್ಞಾನ ಸಂಸ್ಥೆ, ವಿಎಸ್ ಎನ್ ಎಲ್, ಎಂ ಎಸ್ ರಾಮಯ್ಯ ಆಸ್ಪತ್ರೆ ಮತ್ತು ಕಾಲೇಜು, ಸದಾಶಿವನಗರ ಮತ್ತು ವಿಐಪಿ ಪ್ರದೇಶ, ಎಸ್ ಪಿ ಎಕ್ಸ್ ಟೆನ್ಷನ್, ಇಸ್ರೊ, ಸಿ.ಎಂ.ಹಳ್ಳಿ, ನ್ಯೂ ಬಿಇಎಲ್ ರಸ್ತೆ, ಕಮರ್ಷಿಯಲ್ ಪ್ರದೇಶ, ಸೀನಪ್ಪ ಬಡಾವಣೆ, ಎಂಎಲ್ ಎ ಬಡಾವಣೆ, ಐಟಿಐ ಬಡಾವಣೆ, ದೇವಸಂದ್ರ, ಜಲದರ್ಶಿನಿ ಬಡಾವಣೆ, ಎಂಎಸ್ ಆರ್ ನಗರ, ಎಕೆ ಕಾಲೊನಿ, ಮತ್ತಿಕೆರೆ ಮತ್ತು ಎಂಎಸ್ ಆರ್ ಇಂಜಿನಿಯರಿಂಗ್ ಕಾಲೇಜು ಪ್ರದೇಶಗಳಲ್ಲಿ ವಿದ್ಯುತ್ ಅಭಾವ ತಲೆದೋರಲಿದೆ.
(ದಟ್ಸ್ ಕನ್ನಡ ವಾರ್ತೆ)
ಸೆ.8ರಂದು ಛತ್ತೀಸ್ ಗಡದ ವಿದ್ಯುತ್ ಗೆ ಚಾಲನೆ












Click it and Unblock the Notifications