ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿಎಸ್ಎಫ್ ಕಿರೀಟ ಮುಡಿಗೇರಿಸಿಕೊಂಡ ಪಂಕಜ್

By Staff
|
Google Oneindia Kannada News

Pankaj does hatrick wins ibsf world titleಬೆಂಗಳೂರು, ಸೆ. 5 : ನಗರದಲ್ಲಿ ನಡೆದ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ ಅಡ್ವಾಣಿ ಅನುಭವಿ ಆಟಗಾರ ಗೀತ ಸೇಥಿ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಪಂಕಜ್ ಅಡ್ವಾಣಿ ಮೂರು ಬಾರಿ ಚಾಂಪಿಯನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗಿದೆ.

ಇಲ್ಲಿನ ಕೆಎಸ್ ಬಿಎ ಹಾಲ್ ನಲ್ಲಿ ನಡೆದ ಪಂದ್ಯದಲ್ಲಿ ಬಿಲಿಯರ್ಡ್ಸ್ ನ ಹಳೆಯ ಹುಲಿ ಎಂದೇ ಖ್ಯಾತಿಯಾಗಿರುವ ಮಾಜಿ ವಿಶ್ವ ಚಾಂಪಿಯನ್ ಗೀತ್ ಸೇಥಿ ಅವರನ್ನು 6-1 ರಲ್ಲಿ ಪಾಯಿಂಟ್ ಫಾರ್ಮೆಟ್ ಮೂಲಕ ಗೆಲುವು ಸಾಧಿಸುವ ಮೂಲಕ ಪಂಕಜ್ ಅಡ್ವಾಣಿಯವರು ಸತತ ಮೂರು ಬಾರಿ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದರು. 2005 ಮತ್ತು 2007ರಲ್ಲಿ ರಲ್ಲಿ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅವರ ಶ್ರೇಷ್ಠ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ 2005ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರಕೂಡ2007ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ದಶಕಗಳಿಂದ ತರಬೇತುದಾರ ಅರವಿಂದ ಸಾವೂರ್ ಅವರ ಕೈಯಲ್ಲಿ ಪಳಗಿರುವ 23ರ ಹರೆಯದ ಪಂಕಜ್, ಕಿರಿಯ ವಯಸ್ಸಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶ್ವ ಚಾಂಪಿಯನ್ ಪ್ರಶಸ್ತಿ ಅಲ್ಲದೇ, 2006ರಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಅನೇಕ ವರ್ಷಗಳ ಕಾಲ ಪಂಕಜ್ ಅಡ್ವಾಣಿ ಅವರು ಗೆಲುವು ಸಾಧಿಸುವ ಮೂಲಕ ಪಾರುಪತ್ಯ ಮೆರೆದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: ಪಂಕಜ್ ಫೇವರೇಟ್
ಮನನೊಂದು ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ: ಆಡ್ವಾಣಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X