ಬೆಳ್ಳುಬ್ಬಿ ರಾಜೀನಾಮೆ: ವಕ್ತಾರ ಅಬ್ಬಾಸ್ ನಕ್ವಿ ಸಮರ್ಥನೆ

ಬೆಂಗಳೂರು, ಆ. 29 : ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಸರ್ಕಾರದಲ್ಲಿ ಬದಲಾವಣೆ ಮಾಡುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿವೇಚನೆ ಬಿಡಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಬ್ಬಾಸ್ ಅಲಿ ನಕ್ವಿ ತಿಳಿಸಿದರು.

ಮುಂದಿನ ತಿಂಗಳ ಸೆಫ್ಟಂಬರ್ 12 ರಿಂದ 14ರ ವರೆಗೆ ನಗರದ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ಹಿತ ದೃಷ್ಟಿ ಧಕ್ಕೆ ಬಾರದ ಹಾಗೆ ಅಗತ್ಯ ಬದಲಾವಣೆಗೆ ಸಮ್ಮತಿಸಲಾಗಿದೆ ಎಂದರು. ತೋಟಗಾರಿಕೆ ಸಚಿವ ಎಸ್.ಕೆ.ಬೆಳ್ಳುಬ್ಬಿ ರಾಜೀನಾಮೆಯನ್ನು ಪಡೆದಿರುವುದನ್ನು ಸಮರ್ಥಿಸಿಕೊಂಡ ಅವರು, ಪಕ್ಷ ಸಂಘಟನೆ ದೃಷ್ಟಿಯಿಂದ ಇಂತಹ ಚಿಕ್ಕ ತ್ಯಾಗಕ್ಕೆ ಸಿದ್ಧವಾಗಬೇಕು ಎಂದು ಹೇಳಿದರು.

ಬರುವ ದಿನಗಳಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಲೋಕಸಭೆ ಚುನಾವಣೆ ಎದುರಾಗಬಹುದು. ಆದ್ದರಿಂದ ಪಕ್ಷದ ಮುಖಂಡರು ಇದಕ್ಕೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು. ಅಮರನಾಥ ವಿವಾದವನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು ಸರ್ಕಾರದ ವೈಫಲ್ಯದಿಂದ ಇಂದು ಕಾಶ್ಮೀರ ಕಣಿವೆಯಲ್ಲಿ ಕೋಮುದಳ್ಳುರಿ ಉಂಟಾಗಿದೆ ಕಿಡಿಕಾರಿದರು. ಅಮರನಾಥ್ ದೇವಸ್ಥಾನಕ್ಕೆ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಎಲ್ಲ ಕ್ರಮಗಳನ್ನು ಶೀಘ್ರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದು ನಕ್ವಿ ಒತ್ತಾಸಿದರು.

(ದಟ್ಸ್ ಕನ್ನಡ ವಾರ್ತೆ)
ಆ.27 ರಂದು ಕತ್ತಿ ಪ್ರಮಾಣ ವಚನ ಸ್ವೀಕಾರ : ಯಡಿಯೂರಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+