ಭಾರತೀಯ ಬಾಕ್ಸರ್ ಗಳ ಕ್ವಾರ್ಟರ್ ಫೈನಲ್ ಇಂದು
ಬೀಜಿಂಗ್, ಆ. 20 : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬುಧವಾರ ಭಾರತೀಯ ಆಟಗಾರರು ಪಾಲ್ಗೊಳ್ಳುವ ಪಂದ್ಯಗಳ ವಿವರ ಹೀಗಿದೆ. ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ 51 ಕೆಜಿ ಪ್ಲೈವೇಟ್ ವಿಭಾಗದಲ್ಲಿ ಜಿತೇಂದರ್ ಕುಮಾರ್ ರಷ್ಯಾದ ಜಾರ್ಜ್ ಬಾಲಕ್ ಸಿನ್ ಅವರನ್ನು ಎದುರಿಸಲಿದ್ದಾರೆ. 75 ಕೆಜಿ ಮಿಡಲ್ ವೇಟ್ ಬಾಕ್ಸಿಂಗ್ ನಲ್ಲಿ ವಿಜೇಂದರ್ ಕುಮಾರ್ ಅವರು ಎಕೋಡಾರ್ ನ ಕಾರ್ಲೋಸ್ ಗಂಗೂರಾ ಅವರ ವಿರುದ್ಧ ಸೆಣಸಲಿದ್ದಾರೆ.
ಟೇಬಲ್ ಟೆನ್ನಿಸ್ ನಲ್ಲಿ ಅಚಾಂತ್ ಶರತ್ ಕಮಲ್ ಅವರು ಆಸ್ಟ್ರೀಯಾ ಆಟಗಾರ ವೇಕ್ಸಿಂಗ್ ಚೆನ್ ಅವರ ವಿರುದ್ಧ ಸೋಲನುಭವಿಸಿ ಕ್ರೀಡಾಕೂಟದಿಂದ ಹೊರಬಿದ್ದರು. ಕುಸ್ತಿಯಲ್ಲಿ ಸುಶೀಲ್ ಕುಮಾರ್ ಪ್ರೀ ಕ್ವಾರ್ಟರ್ ಪೈನಲ್ ತಲುಪುವ ಸಾಧ್ಯತೆಗಳಿವೆ.
(ದಟ್ಸ್ ಕನ್ನಡ ವಾರ್ತೆ)
ಟೇಬಲ್ ಟೆನ್ನಿಸ್ :ಒಲಿಂಪಿಕ್ಸ್ ನಿಂದ ಕಮಲ್ ಔಟ್












Click it and Unblock the Notifications