ನವೋದಯ ಶಾಲೆಯ 50ಮಕ್ಕಳು ಅಸ್ವಸ್ಥ
ಬಾಳೆಹೊನ್ನೂರು, ಆ. 13: ಇಲ್ಲಿನ ಸೀಗೋಡು ನವೋದಯ ಶಾಲೆಯ ಮಕ್ಕಳು ವಿಷಾಹಾರ ಸೇವಿಸಿದ ಪರಿಣಾಮ, ತೀರ್ವವಾಗಿ ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ನಿರ್ವಾಹಕಿ ನಾಗವೇಣಿ ಸೇರಿದಂತೆ ಸುಮಾರು 50 ಜನ ವಿದ್ಯಾರ್ಥಿಗಳು ಬಾಳೇಹೊನ್ನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
***
ನಿಂತಿದ್ದ ಬೈಕ್ ಗೆ ಕ್ರೇನ್ ಢಿಕ್ಕಿ
ಬೆಂಗಳೂರಿನ ಕಲ್ಯಾಣನಗರದಲ್ಲಿ ಇಂದು ಬೈಕ್ ನಿಲ್ಲಿಸಿ, ಕುಳಿತಿದ್ದ ಸವಾರರ ಮೇಲೆ ಕ್ರೇನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇಮೃತಪಟ್ಟಿದ್ದಾರೆ. ಮೃತ ಗಂಡ ಹೆಂಡತಿಯನ್ನು ರಾಮಮೂರ್ತಿನಗರದ ನಿವಾಸಿಗಳಾದ ಆನಂದ್, ಜ್ಯೋತಿಎಂದು ಗುರುತಿಸಲಾಗಿದೆ. ಪ್ರಕರಣವನ್ನು ಬಾಣಸವಾಡಿ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.
****
(ದಟ್ಸ್ ಕನ್ನಡವಾರ್ತೆ)












Click it and Unblock the Notifications