ಆ.12ರಂದು ಬೋಳುವಾರು ಅವರ 'ಸ್ವಾತಂತ್ರ್ಯದ ಓಟ'

ಬೆಂಗಳೂರು, ಆ.7: ಕನ್ನಡ ಸಣ್ಣ ಕಥೆಗಳ ಪ್ರಕಾರದಲ್ಲಿ ಬೋಳುವಾರು ಮಹಮದ್ ಕುಂಇ ಅವರಿಗೆ ವಿಶಿಷ್ಟ ಸ್ಥಾನವಿದೆ. ಕಳೆದ ಕೆಲವರ್ಷಗಳಿಂದ ಅವರ ಒಲವು ಮಕ್ಕಳ ಸಾಹಿತ್ಯ ಕಡೆಗೆ ಹರಿದು ಶಿಶು ಸಾಹಿತ್ಯದಲ್ಲಿ ರಚನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

'ತಟ್ಟು ಚಪ್ಪಾಳೆ ಪುಟ್ಟ ಮಗು' ನಂತಹ ಎರಡು ಶಿಶು ಗೀತೆಗಳ ಸಂಕಲಗಳು ಬಹಳಷ್ಟು ಜನಪ್ರಿಯವೂ ಆಗಿವೆ. ಹಾಗೆಯೇ ಮತ್ತೊಂದು ಗಾಂಧಿಜಿ ಕುರಿತ ಮಕ್ಕಳ ಕೃತಿ 'ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ'ಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಶಿಶು ಸಾಹಿತ್ಯ ಹಾಗೂ ಅವರ ಸಣ್ಣಕಥೆಗಳನ್ನು ಓದಿ ಮೆಚ್ಚಿಕೊಂಡ ಓದುಗರಿಗೆ ಈಗ ಮತ್ತೊಂದು ಸಂತೋಷದ ಸುದ್ದಿ.

ಬೋಳುವಾರು ಅವರ ವಿಶಿಷ್ಟ ಸಣ್ಣ ಕಥೆಗಳು ಓದಿದವರು ಈಗ ನಾಟಕವನ್ನು ನೋಡಿ ಆನಂದಿಸಬಹುದು . ಅವರ ನಾಟಕ 'ಸ್ವಾತಂತ್ರ್ಯದ ಓಟ' ಸ್ವಾತಂತ್ರ್ಯ ದಿನಾಚರಣೆಗೂ ಒಂದು ದಿನ ಮುನ್ನ ಪ್ರದರ್ಶನ ಕಾಣಲಿದೆ. ಸಮುದಾಯ ತಂಡ ಪ್ರದರ್ಶಿಸುವ ಈ ನಾಟಕವನ್ನು ಶಶಿಧರ ಬರಿಘಾಟ್ ನಿರ್ದೇಶಿಸಿದ್ದಾರೆ. 'ಸ್ವಾತಂತ್ರ್ಯದ ಓಟ ' ಆಗಸ್ಟ್ 12 ಮತ್ತು 13ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಾಗೂ ಆಗಸ್ಟ್ 23ರಂದು ರಂಗ ಶಂಕರದಲ್ಲಿ ಪ್ರದರ್ಶನ ಕಾಣಲಿದೆ .

(ದಟ್ಸ್‌ಕನ್ನಡ ಸಭೆ-ಸಮಾರಂಭ)

ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+