ಬೆಂಗಳೂರಿನಲ್ಲಿ ಹಾಡುಹಗಲೇ ರು.36 ಲಕ್ಷ ದರೋಡೆ

ಬೆಂಗಳೂರು, ಆ. 5 : ಕಾರಿನಲ್ಲಿ 36 ಲಕ್ಷ ರುಪಾಯಿಗಳನ್ನು ತೆಗೆದುಕೊಂಡು ತೆರಳುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕಾರಿನಲ್ಲಿ ಇದ್ದವರನ್ನು ಬೆದರಿಸಿ ಹಾಡುಹಗಲೇ ಹಣ ಲಪಟಾಯಿಸಿ ಪರಾರಿಯಾಗಿರುವ ಘಟನೆ ನಗರದ ಕೂಡ್ಲುಗೇಟ್ ಬಳಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಡೆದಿದೆ.

ನಗರದ ಖಾಸಗಿ ಬಟ್ಟೆ ತಯಾರಿಕೆ ಸಂಸ್ಥೆಯಾದ ಗೋಕಲ್ ದಾಸ್ ಕಂಪನಿಗೆ ಸೇರಿದ ಹಣ ಎಂದು ತಿಳಿದುಬಂದಿದ್ದು, ತಿಂಗಳಿನ ಪ್ರಥಮ ವಾರ ಆಗಿದ್ದರಿಂದ ಕಂಪನಿಯ ಕೆಲಸಗಾರರಿಗೆ ಸಂಬಳ ನೀಡುವ ಸಲುವಾಗಿ ಬ್ಯಾಂಕ್ ಗೆ ಹಣವನ್ನು ತುಂಬಲು ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ಇದ್ದ ಖಾಸಗಿ ಕಂಪನಿಯ ಸಿಬ್ಬಂದಿಯಿಂದ ವಿವರಗಳನ್ನು ಪಡೆದುಕೊಂಡಿದ್ದಾರೆ. ದರೋಡೆಕೋರರ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.

ಐಎಎಸ್ ಅಧಿಕಾರಿ ಮನೆ ಕಳ್ಳತನ
ಕೋರಮಂಗಲದ ಪ್ರತಿಷ್ಠಿತ ಬಡಾವಣೆ ಎನ್ನಲಾದ ನ್ಯಾಷನಲ್ ವಿಲೇಜ್ ನ ಗಂಗಾ ಅಪಾರ್ಟ್ ಮೆಂಟ್ ನಲ್ಲಿನ ಮೂರನೇ ಮಹಡಿಯಲ್ಲಿರುವ ಐಎಎಸ್ ಅಧಿಕಾರಿಯೊಬ್ಬರ ಮನೆಯ ಕಿಟಕಿಯನ್ನು ಮುರಿದು ಅಪಾರ ಪ್ರಮಾಣದ ಚಿನ್ನಾಭರಣ, ವಿದೇಶಿ ಕರೆನ್ಸಿ ಯನ್ನು ಕಳುವು ಮಾಡಲಾಗಿದೆ. ಈ ಘಟನೆ ಸೋಮವಾರ ರಾತ್ರಿ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+