ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಮತ್ತೊಬ್ಬ ಸಿಮಿ ಉಗ್ರನ ಸೆರೆ

By Staff
|
Google Oneindia Kannada News

ಬೆಳಗಾವಿ, ಆ. 04 : ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಯಾಕತ್ ಅಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರನಾಗಿದ್ದಾನೆ. ಇವನು ನಿಷೇಧಿತ ಸಿಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ.

ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಉಗ್ರರ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ ಸಂದರ್ಭದಲ್ಲಿ ಈತ ಮುಂಬೈಗೆ ತೆರಳಿದ್ದ ಅಲ್ಲಿಂದ ಭಾನುವಾರ ಅರಬ್ ದೇಶಗಳಿಗೆ ಪ್ರಯಾಣ ಮಾಡುಬೇಕೆನ್ನುವ ಸಮಯದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಸಂಬಂಧಿಸಿದಂತೆ ಮಹತ್ವದ ಪಾತ್ರ ವಹಿಸಿರುವ ಲಿಯಾಕತ್ ಅಲಿ, ನಿಷೇಧಿತ ಸಿಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಲಿಯಾಕತ್ ಅಲಿ ಎಂಬ ಹೆಸರಿನ ಉಗ್ರ ಬೆಳಗಾವಿ ಕೇಂದ್ರೀಯ ಜೈಲಿನಲ್ಲಿರುವುದರಿಂದ ಈತನ ಹೆಸರು ಕೂಡಾ ಲಿಯಾಕತ್ ಅಲಿ ಎಂದಿದ್ದು, ಕೆಲ ಕಾಲ ಪೊಲೀಸರನ್ನು ತಬ್ಬಿಬ್ಬಾಗುವ ಪ್ರಸಂಗ ಜರುಗಿತು. ನಂತರ ತೀವ್ರ ವಿಚಾರಣೆ ನಡೆಸಿದ ಪೊಲೀಸರು ಜೈಲಿನಲ್ಲಿರುವ ಲಿಯಾಕತ್ ಬೇರೆ, ಇದೀಗ ಪೊಲೀಸ್ ಬಲೆಗೆ ಬಿದ್ದಿರುವ ಲಿಯಾಕತ್ ಅಲಿನೇ ಬೇರೆ ಎನ್ನುವ ವಿಷಯವನ್ನು ಮೊದಲು ಎಂದು ಸಾಬೀತುಪಡಿಸಿಕೊಳ್ಳಲಾಯಿತು. ಈಗ ಸಿಕ್ಕಿ ಬಿದ್ದಿರುವ ಶಂಕಿತ ಉಗ್ರ, ಇತ್ತೀಚೆಗೆ ನಡೆದ ಸರಣಿ ಸ್ಫೋಟದ ಕಾರ್ಯಚರಣೆ ಚುರುಕುಗೊಂಡ ಹಿನ್ನೆಲೆಯಲ್ಲಿ ದೇಶ ಬಿಟ್ಟು ಮಧ್ಯಪ್ರಾಚ್ಯ ದೇಶಗಳಾದ ಅರಬ್ ದೇಶಗಳಿಗೆ ತೆರಳಿಲು ಹುನ್ನಾರ ನಡೆಸಿದ್ದ, ಈ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಜಾಲ ಬೀಸಿದ ಉಗ್ರನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಬಲೆಬಿದ್ದಿರುವ ಶಂಕಿತ ಉಗ್ರ ಲಿಯಾಕತ್ ನನ್ನು ಬೆಳಗಾವಿ ಕರೆತರಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಬೆಳಗಾವಿಯಲ್ಲಿ ಸಿಮಿ ಕಾರ್ಯಕರ್ತನ ಬಂಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X