ರಾಮಸೇತು ರಾಷ್ಟ್ರೀಯ ಸ್ಮಾರಕವಲ್ಲ ಎಂದ ಕೇಂದ್ರ
ನವದೆಹಲಿ, ಜು.29: ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕ ಎನ್ನಲು ಯಾವುದೇ ಬಲವಾದ ಆಧಾರಗಳು ಇಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮಂಗಳವಾರ ಸ್ಪಷ್ಟಪಡಿಸಿದೆ.
ಸೇತು ಸಮುದ್ರ ಯೋಜನೆಯಿಂದ ರಾಮಸೇತು ಧ್ವಂಸವಾಗುತ್ತದೆ. ಆದ ಕಾರಣ ಅದರ ನಿರ್ಮಾಣವನ್ನು ತಡೆಯಬೇಕು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆಯುತ್ತಿವೆ. ರಾಮಸೇತುವನ್ನು ರಾಮನೇ ಧ್ವಂಸ ಮಾಡಿದ ಎಂದು ಜು.24ರಂದು ಸರ್ವೋಚ್ಚ ನ್ಯಾಯಲಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಇಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಪಾಲಿ ಎಸ್. ನಾರಿಮನ್ ರಾಮಸೇತು ಪ್ರಾಚೀನ ಸಂಪತ್ತು ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ಜಸ್ಟೀಸ್ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪೀಠಕ್ಕೆ ತಿಳಿಸಿದರು. ರಾಮಸೇತು ನಿರ್ಮಾಣದ ಬಗ್ಗೆ ಇಂದು ಸಂಜೆ ಅಥವಾ ನಾಳೆ ಕೆಲವು ಸಲಹೆಗಳನ್ನು ಪಡೆದುಕೋಳ್ಳಲಿರುವುದಾಗಿ ಅವರು ಹೇಳಿದರು.
ರಾಮಸೇತು ಮಾರ್ಗವನ್ನು ತಪ್ಪಿಸುವ ಪರ್ಯಾಯ ಸಲಹೆಯನ್ನು ವಿಶೇಷ ಮೊಕದ್ದಮೆಯಾಗಿ ಪರಿಗಣಿಸಲಾಗುತ್ತದೆ. ಈ ವಿಷಯಕ್ಕೆ ನಾನು ವೈಯಕ್ತಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇನೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಬೇಕಾಗಿದೆ. ಮುಂದಿನ ಮಂಗಳವಾರ ಅಥವಾ ಬುಧವಾರ ಮತ್ತೆ ನಿಮ್ಮ ಮುಂದೆ ಮತ್ತೆ ಹಾಜರಾಗುತ್ತೇನೆ ಎಂದು ನಾರೀಮನ್ ನ್ಯಾಯಪೀಠಕ್ಕೆ ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)
ರಾಮಸೇತು ರಾಗ ಬದಲಿಸಿದೆ ಕೇಂದ್ರ ಸರ್ಕಾರ
ಕೇಂದ್ರದಿಂದ ಹಿಂದುಗಳ ಭಾವನೆಗೆ ಕೊಡಲಿಯೇಟು
ರಾಮಸೇತು ಧ್ವಂಸ ಮಾಡಿದ್ದು ಸಾಕ್ಷಾತ್ ಶ್ರೀರಾಮ












Click it and Unblock the Notifications