ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಒಪ್ಪಂದದಿಂದ ಲಕ್ಷ ಉದ್ಯೋಗ ಸೃಷ್ಟಿ: ರಾಹುಲ್

By Staff
|
Google Oneindia Kannada News

ಹೈದರಾಬಾದ್, ಜು.29: ಹಲವು ವಾದ ವಿವಾದಗಳಿಗೆ ಕಾರಣವಾದ ಅಮೆರಿಕ-ಭಾರತ ನಡುವಿನ ಅಣು ಒಪ್ಪಂದವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೊಸ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಅಣು ಒಪ್ಪಂದದಿಂದ ದೇಶದಲ್ಲಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವುದಾಗಿ ಹೇಳಿದ್ದಾರೆ.

ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿದ್ದ ಅವರು, ಅಣು ಒಪ್ಪಂದದಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಬಡವರ ಮನೆಯಲ್ಲಿ ವಿದ್ಯುತ್ ಬೆಳಗಲಿದೆ ಎಂದರು. ದೇಶೀಯ ಅಣು ಸ್ಥಾವರಗಳಿಂದ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದರು.

ಗುಡಿಸಲು ತೆರವು
ಭದ್ರತೆ ದೃಷ್ಟಿಯಿಂದ ರಾಹುಲ್ ಗಾಂಧಿ ವಾಸಿಸುವ ತುಘಲಕ್ ರಸ್ತೆಯಲ್ಲಿನ ಗುಡಿಸಲುಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ರಾಹುಲ್‌ ಗಾಂಧಿ ನಿವಾಸದ ಹಿಂಭಾಗದಲ್ಲಿರುವ ಸುಮಾರು 1,500 ಜನಸಂಖ್ಯೆಯ 300 ಗುಡಿಸಲುಗಳನು ಕೂಡಲೆ ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿದೆ. ರಾಹುಲ್ ಗಾಂಧಿ ಸೇರಿದಂತ ಅನೇಕ ಸಂಸದರ ಹಾಗೂ ಗಣ್ಯರ ನಿವಾಸಗಳ ಹಿಂಭಾಗದಲ್ಲಿ ಈ ಗುಡಿಸಲುಗಳು ಇವೆ. ಭದ್ರತಾ ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆತಂಕದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಆದಕಾರಣ ಈ ಗುಡಿಸಲುಗಳನ್ನು ಶೀಘ್ರ ತೆರವುಗೊಳಿಸಲು ಮುಂದಾಗಿದ್ದಾರೆ.

(ಏಜೆನ್ಸೀಸ್)

ಅಣು ಒಪ್ಪಂದ ಅಣ್ವಸ್ತ್ರ ತಯಾರಿಕೆಗೆ ಅಲ್ಲ: ಪ್ರಣಬ್
ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X