ನಾಗರೀಕರ ಭದ್ರತೆಗಾಗಿ ಗುರುತಿನ ಚೀಟಿ, ಸಿಸಿಟಿವಿ
ಬೆಂಗಳೂರು, ಜು. 29: ಮಹಾನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಗುರುತಿನ ಚೀಟಿ ವಿತರಣೆ ಹಾಗೂ ನಗರದ ಆಯಾಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ(cctv) ಅಳವಡಿಕೆ ಮುಂತಾದ ಭದ್ರತಾ ಕ್ರಮಗಳನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ.
ಶುಕ್ರವಾರ(ಜು. 25)ರಂದು ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಮುಖ್ಯಮಂತ್ರಿಗಳು ಈ ವಿಷಯವನ್ನು ಹೇಳಿದರು. ಭದ್ರತಾ ದೃಷ್ಟಿಯಿಂದ ಗುರುತಿನ ಚೀಟಿ ಜಾರಿಗೆ ತರುವ ಚಿಂತನೆ ನಡೆದಿದೆ. ಬಾಡಿಗೆ ಮನೆ ಉಳ್ಳವರು, ಬಾಡಿಗೆದಾರರ ಸಂಪೂರ್ಣ ವಿವರ ಪಡೆದ ನಂತರ ಮನೆಯನ್ನು ಕೊಡಬೇಕೆಂದು ಎಚ್ಚರಿಸಿದರು.ಇದಲ್ಲದೆ ನಗರದ ಪ್ರಮುಖ ಮಾಲ್ ಗಳು, ಧಾರ್ಮಿಕ ಸ್ಥಳಗಳು, ಚಿತ್ರಮಂದಿರಗಳಲ್ಲಿ ಸಿಸಿಟಿವಿ ಅಳವಡಿಸಲು ಆದೇಶಿಸಲಾಗಿದೆ. ರಾತ್ರಿ ಗಸ್ತು ತಿರುಗುವುದನ್ನು ಬಲಪಡಿಸಲಾಗುವುದು. ರಾಜ್ಯ ಗುಪ್ತಚರ ಇಲಾಖೆ ಹಾಗೂ ಕೇಂ ದ್ರದ ಗುಪ್ತಚರ ಇಲಾಖೆ , ರಾ(RAW) ಜತೆ ನಿರಂತರ ಸಮನ್ವಯ ಕಾಯ್ದುಕೊಂಡು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕೋಕಾ ಕಾಯ್ದೆ ಜಾರಿ
ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಗೆ ತಿದ್ದುಪಡಿ ತಂದು ಜಾರಿಗೊಳಿಸುವ ಬಗ್ಗ್ಗೆ ಗಂಭೀರ ಚಿಂತನೆ ನಡೆದಿದೆ. ಪೋಟಾ ಕಾಯ್ದೆ ಜಾರಿಗೆ ಕೇಂದ್ರದ ಮೇಲೆ ಒತ್ತಡ, ಕರಾವಳಿ ಪ್ರದೇಶಗಳಲ್ಲಿ ಗಡಿಭದ್ರತೆ, ರಾಜ್ಯದ ಎಲ್ಲಾ ಜಲಾಶಯಗಳಿಗೂ ಬಿಗಿಭದ್ರತೆ, ಭಯೋತ್ಪಾದನಾ ನಿಗ್ರಹಕ್ಕೆ ಪೊಲೀಸರಿಗೆ ವಿಶೇಷ ತರಬೇತಿ, ಪೊಲೀಸ್ ವ್ಯವಸ್ಥೆಯ ಆಧುನೀಕರಣ ಇವು ಸರ್ಕಾರದ ಮುಂದಿರುವ ಅದ್ಯತೆಗಳು ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)
ಉಗ್ರರ ನಿಗ್ರಹಕ್ಕೆ ಶೀಘ್ರದಲ್ಲೇ ಹೊಸ ನೀತಿ:ಬಿಎಸ್ ವೈ
ಉಗ್ರರ ನಿಗ್ರಹಕ್ಕೆ ಕೋಕಾ ಕಾಯ್ದೆ ಅಗತ್ಯ: ಬಿಎಸ್‌ವೈ
ಬಾಂಬ್ ಸ್ಫೋಟ: ಸುಳಿವು ನೀಡಿದವರಿಗೆ ಲಕ್ಷ ರು. ಬಹುಮಾನ












Click it and Unblock the Notifications