ಉಗ್ರರ ಮುಂದಿನ ಗುರಿ ಚೆನ್ನೈ, ಕೊಲ್ಕತ್ತಾ?

ಚೆನ್ನೈ, ಜು. 29 : ಬೆಂಗಳೂರು ಮತ್ತು ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟಿಗೊಳಿಸಿ ತಲ್ಲಣ ಉಂಟು ಮಾಡಿರುವ ಉಗ್ರರು ಮುಂದಿನ ಗುರಿ ಚೆನ್ನೈ ಮತ್ತು ಕೊಲ್ಕತ್ತಾ ನಗರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕೇಂದ್ರ ಗುಪ್ತಚರ ಮೂಲಗಳು ತಿಳಿಸಿವೆ. ಉಗ್ರರು 'ಬ್ಯಾಕ್ 'ಎಂಬ ಹೆರಿಸನಡಿಯಲ್ಲಿ ರಹಸ್ಯ ಕಾರ್ಯಚರಣೆಯೊಂದು ಭಾರಿ ಚಟುವಟಿಕೆಯಲ್ಲಿ ನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮತ್ತು ಅಹಮದಾಬಾದ್ ನಲ್ಲಿ ನಡೆದ ಸ್ಫೋಟ ಕೂಡಾ 'ಬ್ಯಾಕ್ 'ಎಂಬ ಹೆಸರಿನಡಿಯಲ್ಲಿಯೇ ಕಾರ್ಯಚರಣೆ ನಡೆಸಿದ ಉಗ್ರರ ತಂಡ ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಗುರಿಯನ್ನು ಚೆನ್ನೈ ಮತ್ತು ಕೋಲ್ಕತ್ತಾ ಇರಿಸಿಕೊಂಡಿದ್ದು, ಅನಾಹುತ ಮಾಡುವ ಸಾಧ್ಯತೆಗೆ ಕೈಹಾಕಿವೆ ಎಂದು ಅವರು ಎಚ್ಚರಿಸಿದ್ದಾರೆ.

ಆಗಸ್ಟ್ 15 ರಂದು ತಮಿಳುನಾಡು ಮತ್ತು ಕೊಲ್ಕತ್ತಾದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚನ್ನು ರೂಪಿಸಿದ್ದಾರೆ. ಸ್ಫೋಟ ಬೆದರಿಕೆ ಹಿನ್ನಲೆಯಲ್ಲಿ ತಮಿಳುನಾಡು ಪೊಲೀಸರು ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಿದ ಪರಿಣಾಮ ಸ್ಫೋಟದ ರೂವಾರಿ ಎನ್ನಲಾದ ಅಬ್ದುಲ್ ಗಫೂರ್ ಎಂಬಾತನನ್ನು ಬಂಧಿಸಿದ್ದಾರೆ.

ಗಫೂರ್ ಸ್ಫೋಟಕ್ಕೆ ಬೇಕಿರುವ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಆಗಸ್ಟ್ 15 ರಂದು ಚೆನ್ನೈ ಮತ್ತು ತಿರುನೆಲ್ವೇಲಿ ತೆರಳುವ ರೈಲಿಗೆ ಮೊದಲು ಬಾಂಬ್ ಸ್ಫೋಟಿಸಲು ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಸಂಶಯಾಸ್ಪದ ವ್ಯಕ್ತಿಯನ್ನು ಬಂಧಿಸಿರುವ ತಮಿಳುನಾಡು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಚೆನ್ನೈ ಪೊಲೀಸ್ ಆಯುಕ್ತ ಎಂ.ಎನ್.ಮಂಜುನಾಥ್, ಶಂಕಿತ ಉಗ್ರ ಅಬ್ದುಲ್ ಗಫೂರ್ ನನ್ನು ಸೋಮವಾರ ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಆತನ ಮನೆಯನ್ನು ವಶಕ್ಕೆ ತಗೆದುಕೊಂಡು ತಪಾಸಣೆ ಮಾಡಲಾಗಿದ್ದು, ಸ್ಫೋಟಕ ಸಾಮಗ್ರಿಗಳು, ಜಿಲೆಟಿನ್ ಕಡ್ಡಿಗಳು. ವೈರ್ ಗಳು ದೊರೆತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚೆನ್ನೈ, ತಿರುನೆಲ್ವೇಲಿ, ಮಧುರೈ ನಗರಗಳ ರೈಲು ನಿಲ್ದಾಣ ಮತ್ತು ಪ್ರಮುಖ ಸ್ಥಳಗಳಿಗೆ ಬಾಂಬ್ ಇಡಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಅಪರಾಧಿ ನಿಗ್ರಹ ದಳಕ್ಕೆ ಸೆರೆಸಿಕ್ಕ 3 ಉಗ್ರರು
ಶಂಕಿತ ಉಗ್ರ ಅಬ್ದುಲ್ ಹಲೀಂ ಜತೆ ತೀವ್ರ ವಿಚಾರಣೆ
ಅಹಮದಾಬಾದ್ ಸ್ಫೋಟ ಸಿಮಿ ಉಗ್ರನ ಬಂಧನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+