ವಿಶ್ವಾಸ ಮತ : ಯುಪಿಎಗೆ ನಿಚ್ಚಳ ಗೆಲುವು

Manmohan Singh wins trust vote in Lok Sabhaನವದೆಹಲಿ, ಜು.22 : ವಿಶ್ವಾಸಮತ ಗಳಿಸಲು ವಿರೋಧ ಪಕ್ಷದವರಿಗೆ ಹಣ ನೀಡಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪ ಮತ್ತು ವಿರೋಧಗಳ ನಡುವೆ ಪ್ರಧಾನಿ ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ವಿಶ್ವಾಸಮತದಲ್ಲಿ ಜಯ ಸಾಧಿಸಿದೆ. ಯುಪಿಎ ಪರವಾಗಿ 275 ಮತಗಳು ಬಂದರೆ, ವಿರೋಧವಾಗಿ 256 ಮತಗಳು ಬಿದ್ದಿವೆ. ಒಟ್ಟು 19 ಮತಗಳ ಅಂತರದಿಂದ ಯುಪಿಎ ಜಯ ಸಾಧಿಸಿದೆ.

ಮತ ಗಳಿಸಲು ಯುಪಿಎ ಸರ್ಕಾರ ಹಣದ ಆಮಿಷ ಒಡ್ಡಿ ನಡೆಸಿದ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಅಣಕ ಎಂದು ವಿರೋಧಪಕ್ಷಗಳು ಯುಪಿಎ ಜಯವನ್ನು ಬಣ್ಣಿಸಿವೆ. ಕರ್ನಾಟಕದ ಮೂರು ಸಂಸದರೂ ಕೂಡ ಬಿಜೆಪಿಗೆ ಕೈಕೊಟ್ಟಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಾಂಗ್ಲಿಯಾನಾ ಮತ್ತು ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಂಜುನಾಥ ಕುನ್ನೂರು ಯುಪಿಎ ಪರವಾಗಿ ಮತ ಚಲಾಯಿಸಿದ್ದಾರೆ. ಮತ್ತೊಬ್ಬ ಬಿಜೆಪಿ ಪಕ್ಷದ ಸಂಸದೆ ಮನೋರಮಾ ಮಧ್ವರಾಜ್ ತಟಸ್ಥವಾಗುಳಿದರು.

ವಿಶ್ವಾಸಮತ ಗಳಿಸಲು ಕನಿಷ್ಠ 272 ಮತಗಳನ್ನು ಯುಪಿಎ ಸರ್ಕಾರ ಪಡೆಯಬೇಕಿತ್ತು. ಮೊದಲ ಹಂತದ ಎಣಿಕೆ ಪ್ರಕಟವಾದಾಗ ಯುಪಿಎ ಪರ 253 ಹಾಗೂ ವಿರುದ್ಧ 232 ಬಿದ್ದಿದ್ದವು. ಒಟ್ಟು 10 ಸಂಸದರು ಮತ ಚಲಾಯಿಸಿಲ್ಲ.

ಸಮಯ ಸರಿಯಾಗಿ 7.30ಕ್ಕೆ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಮನವಿ ಮಾಡಿಕೊಂಡರು. ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತಗಳನ್ನು ಹಾಕಲಾಯಿತು. ಚೀಟಿ ಮೂಲಕ ತಮ್ಮ ಹೆಸರು, ಸದಸ್ಯತ್ವದ ನಂಬರ್, ಪರ ವಿರೋಧದ ಗುರುತು ಹಾಕಿ ಎಂದು ಘೋಷಣೆ ಮಾಡಲಾಯಿತು. ಪ್ರದಾನ ಮಂತ್ರಿ ಮನಮೋಹನ್ ಸಿಂಗ್ ಸರ್ಕಾರ ವಿಶ್ವಾಸ ಮತದಲ್ಲಿ ಮುನ್ನಡೆ ಸಾಧಿಸಿದ್ದಂತೆಯೇ ಪಕ್ಷದ ಸಹದ್ಯೋಗಿಗಳೊಂದಿಗೆ ಕೈ ಕುಲುಕಿ ಸಂತೋಷ ವ್ಯಕ್ತಪಡಿಸಿದ್ದರು.

ಕಳೆದ ಎರಡು ದಿನಗಳಿಂದ ನಡೆದ ವಿಶೇಷ ಅಧಿವೇಶನದಲ್ಲಿ ಅಮೇರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದವೇ ಪ್ರಮುಖ ಚರ್ಚೆಯಾಯಿತು. ಇದೇ ವಿಷಯದ ಮೇಲೆ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಅಲ್ಪಮತಕ್ಕೆ ಕುಸಿದಿದ್ದ ಸರ್ಕಾರ ಸಂಸತ್ತಿನಲ್ಲಿ ತನ್ನ ಬಲಾಬಲವನ್ನು ಸಾಬೀತುಪಡಿಸಬೇಕು ಎಂದು ವಿರೋಧ ಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿಶ್ವಾಸಮತಕ್ಕೆ ದಿನವನ್ನು ನಿಗದಿ ಮಾಡಿದ್ದರು. ಅದರ ಜತೆಗೆ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದ್ದರು. ವಿವಿಧ ಪಕ್ಷಗಳ ಪರ ವಿರೋಧದ ನಡುವೆ ಯುಪಿಎ ಸರ್ಕಾರ ತನ್ನ ಬಲಾಬಲವನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.

ಎರಡು ದಿನಗಳ ಅಧಿವೇಶನದಲ್ಲಿ ಮುಖ್ಯವಾಗಿ ಸಮಾಜವಾದಿ ಪಕ್ಷದ ಮಪಖಂಡರು ಬಿಜೆಪಿ ಸಂಸದರಿಗೆ ಹಣದ ಆಮಿಷ ನೀಡಿದ್ದರು ಎಂದು ಸದನದಲ್ಲಿ ದುಡ್ಡಿನ ಪ್ರದರ್ಶನ ಮಾಡಿದ್ದು, ಲೋಕಸಭೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಲೋಕಸಭೆಯಲ್ಲಿ ಓಟಿಗಾಗಿ ಕಂತೆಕಂತೆ ನೋಟು!
ಸೋನಿಯಾರನ್ನು ಭೇಟಿ ಮಾಡಿದ ಮಣ್ಣಿನ ಮಗ
ರಾಜ್ಯ ಬಿಜೆಪಿಯ ನಾಲ್ಕು ಸಂಸದರು ಯುಪಿಎ ಪರ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+