7.15ಕ್ಕೆ ವಿಶ್ವಾಸಮತ ಪ್ರದರ್ಶನಕ್ಕೆ ಸ್ಪೀಕರ್ ತಾಕೀತು

ನವದೆಹಲಿ, ಜು. 22 : ಮಂಗಳವಾರ ಸಂಜೆ ಸರಿಯಾಗಿ 7.15 ಕ್ಕೆ ವಿಶ್ವಾಸಮತ ಪ್ರದರ್ಶನ ಮಾಡಬೇಕು ಎಂದು ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ ಯುಪಿಎ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಸತತ ಎರಡು ದಿನಗಳ ಸುದೀರ್ಘ ಚರ್ಚೆಯ ನಂತರ ಅಧಿವೇಶನ ಇಂತಿಮ ಘಟ್ಟ ತಲುಪಿದ್ದು, ಸರ್ಕಾರದ ಅಳಿವು ಉಳಿವಿಗೆ ಇನ್ನೇನು ಉತ್ತರ ಸಿಗಲಿದೆ.

ಈ ಮಧ್ಯೆ ಬಿಜೆಪಿ ಸಂಸದರಿಗೆ ಲಂಚದ ಆಮಿಷ ಒಡ್ಡಿದರು ಎನ್ನುವ ಆರೋಪಕ್ಕೆ 6 ಗಂಟೆಗೆ ಆರಂಭವಾಗಬೇಕಿದ್ದ ಅಧಿವೇಶನ ಕೋಲಾಹಲ ಕೇಂದ್ರವಾದ ಕಾರಣ ಸದನವನ್ನು ಮತ್ತೆ ಮುಂದೂಡಲಾಯಿತು. ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯರು ಪಟ್ಟುಹಿಡಿದಿದ್ದಾರೆ. ಬಿಜೆಪಿ ಸಂಸದರಾದ ಅಶೋಕ್ ಅರ್ಗಲ್, ಮಹಾವೀರ್ ಬೋಗಾರ್ ಮತ್ತು ಫಗ್ಗಾನ್ ಸಿಂಗ್ ಕುಲಾಸ್ತೆ ಅವರಿಗೆ ಸಮಾಜವಾದಿ ಪಕ್ಷ ಮುಖಂಡರು ತಲಾ ಮೂರು ಕೋಟಿ ರುಪಾಯಿಗಳನ್ನು ನೀಡಲು ಬಂದಿದ್ದರು ಎಂದು ಸದನದಲ್ಲಿ ಬಿಜೆಪಿ ಸದಸ್ಯರು ಗಲಾಟೆ ನಡೆಸಿದ್ದರು. ಸರಿಯಾಗಿ 7.15ಕ್ಕೆ ವಿಶ್ವಾಸಮತ ಪ್ರದರ್ಶನ ಮಾಡಬೇಕು ಎಂದು ಯಪಿಎ ಸರ್ಕಾರಕ್ಕೆ ಹೇಳಿ ಸದನವನ್ನು ಮುಂದೂಡಿದರು.

ಯುಪಿಎ ಪರ ಮತ್ತು ವಿರೋಧ ಮತಗಳು ಈ ಕೆಳಗಿನಂತಿವೆ.

ಯುಪಿಎ ಪರ- 272

ಕಾಂಗ್ರೆಸ್ - 152
ಆರ್ ಜೆಡಿ- 24
ಎಸ್ಪಿ - 34
ಎನ್ ಸಿಪಿ - 11
ಪಿಎಂಕೆ - 16
ಜೆಎಂಎಂ - 5
ಡಿಎಂಕೆ - 16
ಎಲ್ ಜಿಪಿ - 4
ಪಿಡಿಪಿ - 1
ಎನ್ ಸಿ - 2
ಇತರರು - 17

ಯುಪಿಎ ವಿರುದ್ಧ - 268

ಬಿಜೆಪಿ - 128
ಶಿವಸೇನೆ - 11
ಬಿಜೆಡಿ - 11
ಅಕಾಲಿ ದಳ - 8
ಜೆಡಿಯು - 6
ಬಿಎಸ್ಪಿ - 17
ಟಿಡಿಪಿ - 4
ಜೆಡಿಎಸ್ - 3
ಆರ್ ಎಲ್ ಡಿ - 3
ಎಡಪಕ್ಷಗಳು - 60
ಎಂಡಿಎಂಕೆ - 2
ಇತರರು - 2

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+