ಸ್ವಾಮಿ ಶ್ರದ್ಧಾನಂದಗೆ ಜೀವಾವಧಿ ಶಿಕ್ಷೆ: ಸುಪ್ರಿಂಕೋರ್ಟ್
ಬೆಂಗಳೂರು, ಜು. 22 : ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಾಕೀರಾ ಅವರ ಜೀವಂತ ದಫನ್ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವಿವಾದಿತ ದೇವಮಾನವ ಸ್ವಾಮಿ ಶ್ರದ್ಧಾನಂದ ಅವರಿಗೆ ಸುಪ್ರಿಂಕೋರ್ಟ್ ಜೀವಾವದಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿ.ಎನ್.ಅಗರ್ ವಾಲ್, ಜಿ.ಎಸ್.ಸಿಂಘ್ವಿ ಮತ್ತು ಅಪ್ತಾಬ್ ಅಲಂ ಅವರನ್ನು ಒಳಗೊಂಡು ತ್ರಿಸದಸ್ಯರ ಪೀಠ ಸಮಗ್ರ ವಿಚಾರಣ ನಂತರ ವಿವಾದಿತ ದೇವಮಾನವ ಶ್ರದ್ಧಾನಂದಸ್ವಾಮಿಗೆ ಗಲ್ಲು ಶಿಕ್ಷೆಯ ಬದಲು ಜೀವಾವಧಿ ಶಿಕ್ಷೆ ವಿಧಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಮತ್ತು ಮಾರ್ಕಂಡಯ ಕಟ್ಜಿ ವಿಚಾರಣೆ ನಡೆಸಿದ ಪೀಠ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠಕ್ಕೆ ವರ್ಗಾಯಿಸಲಾಗಿತ್ತು. ವಿಚಾರಣೆ ನಂತರ ವಿವಾದಿತ ದೇವಮಾನವ ಶ್ರದ್ಧಾನಂದ ಅವರಿಗೆ ಜೀವಾವಧಿ ಶಿಕ್ಷೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಅಪರಾಧಿಗೆ ಜೀವಾವಧಿ ಸೂಕ್ತ ಎಂದು ಹೇಳಿದ್ದರು. ಆದರೆ ಇನ್ನೂಬ್ಬ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜಿ ಇದು ಗಂಭೀರ ಕೃತ್ಯವಾಗಿದ್ದು, ಇದಕ್ಕೆ ಗಲ್ಲು ಶಿಕ್ಷೆಯೇ ಸೂಕ್ತ ಎಂದಿದ್ದರು. ಈ ಹಿನ್ನಲೆಯಲ್ಲಿ ಮುಖ್ಯನ್ಯಾಯಮೂರ್ತಿಗಳು ಮೂವರು ನ್ಯಾಯಮೂರ್ತಿಗಳನ್ನು ವಿಚಾರಣೆಗಾಗಿ ನೇಮಿಸಿದ್ದರು.
ಘಟನೆ ವಿವರ
ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು ಮತ್ತು ನಿವೃತ್ತ ಐಎಫ್ ಎಸ್ ಅಧಿಕಾರಿಯೊಬ್ಬರ ಪತ್ನಿ ಶಾಕೀರಾ ಅವರು ಪತಿಯನ್ನು ತೊರೆದು ಸ್ವಾಮಿ ಶ್ರದ್ಧಾನಂದ (ಮುರಳಿ ಮನೋಹರ ಮಿಶ್ರಾ) ಅವರನನ್ನು ಮದುವೆಯಾಗಿದ್ದರು. ಹಣದ ಅಸೆಗಾಗಿ ಸ್ವಾಮಿ ಶ್ಗದ್ಧಾನಂದ 1991 ರಲ್ಲಿ ಶಾಕೀರಾ ಅವರನ್ನು ಕಾಫಿನ್ ಬಾಕ್ಸ್ ನಲ್ಲಿ ಹಾಕಿ ಜೀವಂತವಾಗಿ ಸುಟ್ಟು ಹಾಕಿದ್ದರು. ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಶಾಕೀರಾ ಕಾಣೆಯಾಗಿದ್ದಾರೆ ಎಂದು ದೂರನ್ನು ಸಲ್ಲಿಸಲಾಗಿತ್ತು.
ಮೂರು ವರ್ಷಗಳ ನಂತರ 1993ರಲ್ಲಿ ಪ್ರಕರಣ ಹೊರಗೆ ಬಂದು, ಶ್ವಾಮಿ ಶ್ರದ್ಧಾನಂದ ಆಪರಾಧಿ ಎಂದು ಸಾಬೀತಾಗಿದ್ದಿರಂದ 2005 ಮೇ 21 ರಂದು ಜಿಲ್ಲಾ ಮತ್ತು ಶೆಷನ್ ನ್ಯಾಯಲಯ ಮರಣದಂಡನೆ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಶ್ರದ್ಧಾನಂದ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಮತ್ತು ಕೆ.ಸಿ.ಕಬ್ಬಿನ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಂತರ2005 ಸೆಪ್ಟಂಬರ್ 12 ರಂದು ಜಿಲ್ಲಾ ನ್ಯಾಯಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಜು.22ರಂದು ಸುಪ್ರಿಂಕೋರ್ಟ್ ಶ್ರದ್ಧಾನಂದ ಅವರಿಗೆ ಜೀವಾವದಿ ಶಿಕ್ಷೆ ನೀಡಿದೆ.












Click it and Unblock the Notifications