ಗೆಲುವಿನ ಹುಮ್ಮಸ್ಸಿನಲ್ಲಿ ಮನಮೋಹನ್ ಸಿಂಗ್

ನವದೆಹಲಿ, ಜು. 22 : ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಗೆಲುವು ಖಚಿತ. ವಿಶ್ವಾಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆಯ ಸಂಸದರು ನಮ್ಮಲ್ಲಿದ್ದಾರೆ ಎಂದು ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವಿಶ್ವಾಸವ್ಯಕ್ತಪಡಿಸಿದರು. ಯುಪಿಎ ಸೋಲಿಸಲು ಪಣತೊಟ್ಟಿರುವ ವಿರೋಧಿಗಳಿಗೆ ಮಂಗಳವಾರ ಸಂಜೆ 6 ಗಂಟೆಗೆ ಉತ್ತರ ದೊರೆಯಲಿದೆ ಎಂದು ಅವರು ತೀರುಗೇಟು ನೀಡಿದರು.

ವಿಶ್ವಾಸಮತಕ್ಕೂ ಮುನ್ನ ಪ್ರಧಾನಮಂತ್ರಿಯವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತ ಗೆಲುವಿನ ಕುರಿತು ಯಾರಿಗೂ ಅನುಮಾನ ಬೇಡ. ದೇಶಕ್ಕೆ ಒಳಿತು ಬಯಸಿರುವ ಯುಪಿಎಗೆ ಜಯ ನಿಶ್ಚಿತ ಎಂದರು. ಇಂಥ ಸುಳ್ಳು ವದಂತಿಗಳಿಗೆ ಕಿವಿಗೊಡುವುದು ಬೇಡ ಎಂದ ಅವರು, ಇದು ವಿರೋಧಿಗಳು ಹುಟ್ಟು ಹಾಕುತ್ತಿರುವ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಗನಕ್ಕೇರುತ್ತಿರುವ ಹಣದುಬ್ಬರ ಯುಪಿಎ ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಣದುಬ್ಬರ ನಿಯಂತ್ರಿಸಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಇದರ ಕಡೆ ಗಮನ ಹರಿಸಿ ನಿಯಂತ್ರಿಸಲು ಪ್ರಯತ್ನಿಸಲಾಗುವುದು . ಜತೆಗೆ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಮನಮೋಹನ್ ಸಿಂಗ್ ಹೇಳಿದರು.

ಇಂದು ಸಂಜೆ ನಡೆಯುವ ವಿಶ್ವಾಸಮತ ಪ್ರದರ್ಶನದಲ್ಲಿ ಬಿಜೆಪಿಯ ಕೆಲ ಸಂಸದರು ಗೈರು ಹಾಜರಾಗಲಿರುವುದು ಮತ್ತು ಶಿವಸೇನೆ ಮತ್ತು ಎನ್ ಡಿಎದ ಕೆಲ ಸಂಸದರು ಯುಪಿಎಗೆ ಮತ ಚಲಾಯಿಸುವ ಸಾಧ್ಯತೆ ಇರುವುದರಿಂದ ಯುಪಿಎ ಗೆಲುವು ಸಾಧಿಸುವ ಮುನ್ಸೂಚನೆ ಕಂಡು ಬರತೊಡಗಿದೆ.

(ಏಜೆನ್ಸೀಸ್)

ಯುಪಿಎ ಸರ್ಕಾರದ ಜುಟ್ಟು ಏಳು ಮಂದಿ ಕೈಯಲ್ಲಿ !
ಆರು ಮೂರು ಒಂಬತ್ತು ವಿಶ್ವಾಸಮತ ಪ್ರದರ್ಶನಗಳು!
ಸರ್ಕಾರಕ್ಕೆ ಗೆಲುವು ಖಚಿತ: ಪ್ರಧಾನಿ ವಿಶ್ವಾಸ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+