ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಓಟಿಗಾಗಿ ಕಂತೆಕಂತೆ ನೋಟು!

By Staff
|
Google Oneindia Kannada News

ಬೆಂಗಳೂರು, ಜು. 22 : ಇದು ನಿಜಕ್ಕೂ ಪ್ರಭಾಪ್ರಭುತ್ವದ ಅಣಕ ಹಾಗೂ ಲೋಕಸಭೆ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ಮಧ್ಯಪ್ರದೇಶದ ಮೂವರು ಬಿಜೆಪಿ ಸಂಸದರಿಗೆ ಸಮಾಜವಾದಿ ಪಕ್ಷ ಹಣದ ಆಮಿಷ ನೀಡಿ ಸೆಳೆಯುವ ಪ್ರಯತ್ನ ನಡೆಸಿದ ಹಿನ್ನಲೆಯಲ್ಲಿ ಬಿಜೆಪಿ ಸಂಸದರು ನೋಟಿನ ಕಂತೆಗಳ ಮೂಲಕ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಸಮಾಜವಾದಿ ಪಕ್ಷದ ಕ್ರಮವನ್ನು ಬಲವಾಗ ಖಂಡಿಸಿದ ಬಿಜೆಪಿ ಸಂಸದರು ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಪರಿಣಾಮ ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು.

ವಿಶ್ವಾಸಮತದಲ್ಲಿ ಪಾಲ್ಗೊಳ್ಳದಿರಲು ಸಮಾಜವಾದಿ ಪಕ್ಷದ ಮುಖಂಡರು ಬಿಜೆಪಿ ಸಂಸದರನ್ನು ಕುದುರೆ ವ್ಯಾಪಾರದ ಮೂಲಕ ಬಲಿ ತೆಗೆದುಕೊಳ್ಳಬೇಕು ಎನ್ನುವ ಯೋಜನೆ ಫಲಿಸದೆ. ಪ್ರಕರಣ ಬಹಿರಂಗಗೊಂಡಿರುವುದು ಈ ಕೋಲಾಹಲಕ್ಕೆ ಮುಖ್ಯ ಕಾರಣ. ಸಮಾಜವಾದಿ ಪಕ್ಷದ ನಾಯಕರ ಆಮಿಷವನ್ನು ಸ್ಪಷ್ಟವಾಗಿ ನಿರಾಕರಿಸಿದ ಬಿಜೆಪಿ ಸಂಸದರು ಸಮಾಜವಾದಿ ಪಕ್ಷ ನೀಡಿದ್ದ ರು. 3 ಕೋಟಿ ಹಣವನ್ನು ಸದನದ ಮುಂದಿಟ್ಟರು. ಕಂತೆಕಂತೆ ಚೀಲದಲ್ಲಿದ್ದ ಹಣವನ್ನು ಸಭಾಧ್ಯಕ್ಷರ ಮೇಜಿನ ಬಳಿ ಸುರಿದ ಬಿಜೆಪಿ ಸಂಸದರು ಉಗ್ರ ಪ್ರತಿಭಟನೆ ನಡೆಸಿದರು.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷದ ನಾಯಕ ಎಲ್.ಕೆ.ಆಡ್ವಾಣಿ, ಲೋಕಸಭೆ ಇತಿಹಾಸದಲ್ಲಿ ಇದು ಅಸಹ್ಯಕರ ಸಂಗತಿ, ನಾಚಿಕೆಗೇಡಿನ ಕೆಲಸ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಇಂಥ ಕ್ರೂರ ಕೆಲಸಕ್ಕೆ ಇಳಿಯುತ್ತವೆ ಎಂದು ಎಣಿಸಿರಲಿಲ್ಲ. ಸೋಮವಾರವೇ ಈ ಕುರಿತು ನನಗೆ ತಿಳಿದಿತ್ತು. ಈ ವಿಷಯ ಕುರಿತು ಭಾರಿ ಮುಂಜಾಗ್ರತೆ ವಹಿಸಿದ್ದೆವು. ಆದರೂ ಸಂಸದರನ್ನು ಲಂಚದ ಮೂಲದ ಖರೀದಿಸಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ಇದರ ವಿರುದ್ಧ ಉಗ್ರ ಕ್ರಮಕೈಗೊಳ್ಳಬೇಕು. ಈ ಷಡ್ಯಂತ್ರದಲ್ಲಿ ಅಡಗಿರುವ ಮರ್ಮವನ್ನು ತಿಳಿದುಕೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಲಂಚದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಲೋಕಸಭೆ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಸದನ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಕೂಡಾ ಆಕ್ರೋಶ ವ್ಯಕ್ತಪಡಿಸಿದ ಆಡ್ವಾಣಿ ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ತಲಾ ಒಬ್ಬೊಬ್ಬ ಸಂಸದರಿಗೆ ಮೂರು ಕೋಟಿ ರುಪಾಯಿಗಳ ಆಮಿಷ ಒಡ್ಡಿದ್ದರು.

ಸ್ಪೀಕರ್ ಸಭೆ
ಘಟನೆ ತಿಳಿಯುತ್ತಿದ್ದಂತೆಯೇ ಸ್ಪೀಕರ್ ಸೋಮನಾಥ್ ಚಟರ್ಜಿ ತಮ್ಮ ಕೊಠಡಿಯಲ್ಲಿ ಪ್ರಮುಖ ಪಕ್ಷಗಳ ಮುಖಂಡರ ಸಭೆ ನಡೆಸಿದ್ದಾರೆ. ಪ್ರಕಾಶ್ ಕಾರಟ್ ಘಟನೆಯನ್ನು ಬಲವಾಗಿ ಖಂಡಿಸಿದರು. ಇತಿಹಾಸದಲ್ಲಿ ಕಪ್ಪು ಚುಕ್ಕೆ ಇದು. ಜಗತ್ತಿನಲ್ಲಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದರನ್ನು ಖರೀದಿಸುವ ಕೆಲಸ ನಾಚಿಕೆಗೇಡಿನ ಬೆಳವಣಿಗೆ ಎಂದಿದ್ದಾರೆ. ಈ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿಬೇಕು ಎಂದು ಎಡಪಕ್ಷಗಳ ನಾಯಕಿ ಬೃಂದಾ ಕಾರಟ್ ಆಗ್ರಹಿಸಿದ್ದಾರೆ. ಘಟನೆ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸದನದಲ್ಲಿ ಉತ್ತರ ನೀಡಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ವಿಶ್ವಾಸಮತದಲ್ಲಿ ಯುಪಿಎಗೆ ಸೋಲಾದರೆ ಮುಂದೆ?
ಸಂಸದರ ಬೆಲೆ 25 ಕೋಟಿ: ಬರ್ಧನ್ ಆರೋಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X