ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಬಿ ಗ್ರೂಪ್‌ನಿಂದ ಹೊಸ ಬಿಯರ್ ಘಟಕಗಳು

By Staff
|
Google Oneindia Kannada News

ಬೆಂಗಳೂರು, ಜು.7: ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರೀವರೀಸ್ (ಯುಬಿ ಗ್ರೂಪ್) ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಶೇ.20ರಷ್ಟು ಹೆಚ್ಚಿಸಿಕೊಳ್ಳಲು ಹಾಗೂ ಎರಡು ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 1000 ಕೋಟಿ ರು.ಗಳ ಬಂಡವಾಳವನ್ನು ಹೂಡುತ್ತಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲಾಗುವುದು. ಕರ್ನಾಟಕದಲ್ಲಿ ಸ್ಥಾಪನೆಯಾಗಲಿರುವ ಘಟಕ ಆರಂಭದಲ್ಲಿ ವಾರ್ಷಿಕ 30 ಲಕ್ಷ ಬಿಯರ್ ಕೇಸ್‌ಗಳನ್ನು ಉತ್ಪಾದಿಸಲಿದೆ. ನಂತರ ಅದನ್ನು 120 ಲಕ್ಷ ಕೇಸ್‌ಗಳಿಗೆ ಹೆಚ್ಚಿಸಲಾಗುತ್ತದೆ. ಆಂಧ್ರ ಪ್ರದೇಶ ಘಟಕವು ಆರಂಭದಲ್ಲಿ ವಾರ್ಷಿಕ 60 ಲಕ್ಷ ಕೇಸ್‌ಗಳಷ್ಟು ಬಿಯರ್ ಉತ್ಪಾದನಾ ಸಾಮರ್ಥ್ಯ ಹೊಂದಿ ನಂತರ ಅದನ್ನು 120 ಕೇಸ್‌ಗಳಿಗೆ ಹೆಚ್ಚಿಸುವುದಾಗಿ ಯುಬಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ರವಿ ನೆಡುಂಗಡಿ ತಿಳಿಸಿದರು.

ಪ್ರಸ್ತುತ ಯುಬಿ ಗ್ರೂಪ್ ವಾರ್ಷಿಕ 60.25 ಲಕ್ಷ ಹೆಕ್ಟೊ ಲೀಟರ್ (1ಹೆಕ್ಟೊ ಲೀಟರ್ =100 ಲೀಟರ್) ಬಿಯರನ್ನು ಉತ್ಪಾದಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 71.50 ಲಕ್ಷ ಹೆಕ್ಟೊ ಲೀಟರ್‌ಗಳಿಗೆ ಹೆಚ್ಚಿಸಿಕೊಳ್ಳಲಿದೆ. ಮಹಾರಾಷ್ಟ್ರ, ಒರಿಸ್ಸಾ, ಗೋವಾ, ರಾಜಸ್ಥಾನ, ಪಂಜಾಬ್, ಕರ್ನಾಟಕ ಮತ್ತು ಪಶ್ಚಿಮ ಬಂಗಾಲದ ಘಟಕಗಳ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತದೆ ಎಂದು ನೆಡುಂಗಡಿ ವಿವರಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X