ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ 92.7 ಎಫ್‌ಎಂನಲ್ಲಿ 'ಬೆಂಡೆತ್ತ್ತುಬೆಂಗಳೂರು'

By Staff
|
Google Oneindia Kannada News

ಬೆಂಗಳೂರು, ಜು.7: ಬೆಂಗಳೂರು ನಾಗರಿಕರ ದೂರು-ದುಮ್ಮಾನಗಳನ್ನು ಆಲಿಸಲು 'ಬಿಗ್ ಎಫ್‌ಎಂ' ವಿಭಿನ್ನ ರೀತಿಯ 'ಬೆಂಡೆತ್ತ್ತು ಬೆಂಗಳೂರು' ಕಾರ್ಯಕ್ರಮವನ್ನು ಸೋಮವಾರ (ಜು.7)ದಿಂದ ಬಿತ್ತರಿಸಲಿದೆ.

ಎರಡು ವಾರಗಳ ಕಾಲದ ಈ ಕಾರ್ಯಕ್ರಮ ಪ್ರತಿ ದಿನ ಜು.7ರಿಂದ ಜು.19ರವರೆಗೂ ಬಿಗ್ ಎಫ್‍ಎಂನಲ್ಲಿ ಬಿತ್ತರವಾಗಲಿದೆ. ಭ್ರಷ್ಟಾಚಾರ, ಸಂಚಾರಿ ದಟ್ಟಣೆ, ಸಾರ್ವಜನಿಕ ಆರೋಗ್ಯದಂತಹ ಗಂಭೀರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಬೆಂಗಳೂರು ನಾಗರೀಕರೊಂದಿಗೆ ಚರ್ಚಿಸಲಿದೆ.

ಪ್ರಸಿದ್ಧ ನಟರ ಧ್ವನಿಯನ್ನು ಅನುಕರಣೆ ಮಾಡುತ್ತಾ ಹಾಸ್ಯ ಧಾಟಿಯಲ್ಲಿ ಸಾಗುವ ಕಾರ್ಯಕ್ರಮ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಅವನ್ನು ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಲಿದೆ. ಪ್ರತಿ ದಿನ ಹೊಸಹೊಸ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಶ್ರೋತೃಗಳೊಂದಿಗೆ ಚರ್ಚಿಸಲಿದೆ. ಇದಿಷ್ಟೇ ಅಲ್ಲದೆ ದಿನ ನಿತ್ಯ ಅದೃಷ್ಟಶಾಲಿ ಶ್ರೋತೃ ಒಬ್ಬರನ್ನು ಆಯ್ಕೆ ಮಾಡಿ 'No Thank You' ಪ್ರಶಸ್ತಿಯನ್ನು ಕೊಡಲಿದೆ.

ರೇಡಿಯೋ ಜಾಕಿಗಳಾದ ಹರ್ಷ ಹಾಗೂ ಶೃತಿ ಪ್ರತಿ ದಿನ ಚರ್ಚಿಸಬೇಕಾದ ಮೂರು ಮುಖ್ಯ ವಿಷಯಗಳನ್ನು ಆರಿಸಿಕೊಂಡು ಅವನ್ನು ಜೈಲಿಗೆ ತಳ್ಳುತ್ತಾರೆ. ಬಿಗ್ ಎಫ್ ಎಂ ಶ್ರೋತೃಗಳಿಗೆ ಓಟು ಮಾಡಲು ಕೇಳಲಾಗುತ್ತದೆ. ಯಾವ ವಿಷಯಕ್ಕೆ ಕನಿಷ್ಟ 9027 ಓಟುಗಳು ಬೀಳುತ್ತವೋ ಆ ವಿಷಯವನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ಚರ್ಚೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ! ಹೀಗೆ ಆಯ್ಕೆಯಾದ ವಿಷಯವನ್ನು ನಾಗರಿಕರೊಂದಿಗೆ ಚರ್ಚಿಸಿ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.

ಬಿಗ್ ಎಫ್‌ಎಂ ತನ್ನದೇ ಆದ ವಿಶಿಷ್ಟ ರೀತಿಯ ಕಾರ್ಯಕ್ರಮಗಳಿಗೆ ಹೆಸರಾಗಿದೆ. 'ಬೆಂಡೆತ್ತು ಬೆಂಗಳೂರು' ಸಹ ಅದೇ ರೀತಿಯ ಕಾರ್ಯಕ್ರಮವಾಗಿದ್ದು ಹಾಸ್ಯಧಾಟಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಿದೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ನಾಗರೀಕರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಬಿಗ್‌ಎಫ್‌ಎಂ ಕಾರ್ಯಕ್ರಮದ ಮುಖ್ಯಸ್ಥರಾದ ಸುನಿಲ್ ಕುಮಾರನ್.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X