ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಚುನಾವಣೆ ಆರಂಭ

By Staff
|
Google Oneindia Kannada News

ಬೆಂಗಳೂರು, ಜೂ. 26 : ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಕ್ಷೇತ್ರ, ಎರಡು ಪದವೀಧರರ ಕ್ಷೇತ್ರ ಮತ್ತು ಒಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಇಂದು ಆರಂಭವಾಗಿದೆ. ಭದ್ರತೆ ಹಿನ್ನಲೆಯಲ್ಲಿ ವ್ಯಾಪಕ ಬಂದೋಬಸ್ತ್ ನಿಯೋಜಿಸಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಹಾಗೂ ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಲ್ಲಿ ಇಂದು ಬೆಳಗಿನಿಂದಲೇ ಶಾಂತಿಯುತವಾಗಿ ಮತದಾನ ಆರಂಭವಾಗಿದೆ. ಶಿಕ್ಷಕರ ಎರಡು ಕ್ಷೇತ್ರಗಳಿಗೆ 16, ಎರಡು ಪದವೀಧರ ಕ್ಷೇತಗಳಿಗೆ 19 ಅಭ್ಯರ್ಥಿಗಳು ಸೇರಿದಂತೆ ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ.

ಪಶ್ಚಿಮ ಪದವೀಧರರ ಕ್ಷೇತ್ರ

ವಿಧಾನಸಭೆ ಚುನಾವಣೆ ಸೋಲನುಭವಿಸಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ 5ನೇ ಬಾರಿ ಆಯ್ಕೆ ಬಯಸಿ ಕಾಂಗ್ರೆಸ್ ಪಕ್ಷದ ಮೂಲಕ ಮತ್ತೆ ಆಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಪಕ್ಷದ ವತಿಯಿಂದ ಮೋಹನ್ ಲಿಂಬಿಕಾಯಿ ಕಣದಲ್ಲಿದ್ದಾರೆ. ಕಳೆದ 24 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಪಾಟೀಲ್ ಉತ್ತಮ ಕೆಲಸ ಮಾಡಿಲ್ಲ ಎಂಬ ದೂರುಗಳಿವೆ. ಈ ದೂರುಗಳನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿವೆ ಎನ್ನುವ ಮಾತು ಎಲ್ಲಡೆ ಕೇಳಿ ಬಂದಿದೆ.ಪಾಟೀಲ್ ಗೆ ಗೆಲುವು ಅಷ್ಟೆನೂ ಸರಳವಾಗಿಲ್ಲ,ಹಗ್ಗದ ಮೇಲಿನ ನಡಿಗೆಯೇ ಸರಿ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣ ಏರ್ಪಡುವ ಸಾಧ್ಯತೆಗಳಿವೆ.ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ 71,337 ಮತದಾರರಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರ

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಸಾಧ್ಯತೆಗಳಿವೆ. ಕಳೆದ ಸಲ ಸದಸ್ಯರಾಗಿ ಕೆಲಸ ನಿರ್ವಹಿಸಿದ ಎಚ್.ಸಿ.ಶಿವಶಂಕರ ಮತ್ತು ಬಿಜೆಪಿ ಎ.ಎಚ್.ಶಿವಯೋಗಿಸ್ವಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ವಿಧಾನ ಪರಿಷತ್ ಸದಸ್ಯರಾಗಿ ಶಿವಶಂಕರ ಉತ್ತಮ ಕೆಲಸಗಾರ ಹೆಸರು ಗಳಿಸಿದ್ದು, ಮತದಾರರು ಒಲವು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 61,706 ಮತದಾರರಿದ್ದಾರೆ.ಅದರಲ್ಲಿ ತುಮಕೂರು ನಗರವೊಂದರಲ್ಲೇ ಸುಮಾರು 19 ಸಾವಿರಕ್ಕೂ ಅಧಿಕ ಮತದಾರರಿದ್ದು, ಎಲ್ಲ ಅಭ್ಯರ್ಥಿಗಳ ಕಣ್ಣು ಇಲ್ಲಿನ ಮತದಾರನ ಮೇಲಿದೆ. ಇಲ್ಲಿಯ ಮತದಾರ ಯಾರ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೂ ಅವರು ವಿಜೇತರಾಗುವ ಸಾಧ್ಯತೆಗಳಿವೆ. ಹಾಗೆಯೇ ಸ್ಪರ್ಧಾಚೈತ್ರ ಪತ್ರಿಕೆ ವಸಂತಕುಮಾರ್ ಮತ್ತು ಧನಪಾಲ್ ಕಣದಲ್ಲಿರುವ ಪ್ರಭಾವಿಗಳಾಗಿದ್ದಾರೆ. ಇವರು ಕೂಡಾ ಹೆಚ್ಚು ಮತ ಗಳಿಸುವುದನ್ನು ಅಲ್ಲಗಳೆಯುವಂತಿಲ್ಲ.

ಬೆಂಗಳೂರು ಶಿಕ್ಷಕರ ಕ್ಷೇತ್ರ

ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದಲ್ಲಿ 600 ಮತದಾರರಿದ್ದಾರೆ. ಜೆಡಿಎಸ್ ನಿಂದ ಪುಟ್ಟಣ್ಣ, ಬಿಜೆಪಿಯಿಂದ ಎಂ.ನೀಲಯ್ಯ ಸ್ಪರ್ಧಿಸಿದ್ದು,ಈ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ಚಾಮರಾಜನಗರ ವಿಧಾನಸಭೆ ಕ್ಷೇತ್ರದಿಂದ ಸೋಲುಂಡ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ ಕೂಡಾ ಇಲ್ಲಿ ಅದೃಷ್ಠ ಪರೀಕ್ಷೆ ನಡೆಸಿದ್ದಾರೆ.ಕಳೆದ ಸಲ ಸದಸ್ಯರಾಗಿ ಆಯ್ಕೆಯಾಗಿದ್ದ ಜೆಡಿಎಸ್ ನ ಪುಟ್ಟಣ್ಣ ಉತ್ತಮ ಕೆಲಸಗಾರ ಎನ್ನುವ ಮಾತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿರುವ ಪುಟ್ಟಣ್ಣ ಗೆಲುವು ಸಾಧಿಸುವ ಹುರಿಯಾಳು ಎನ್ನುವ ಮಾತು ಕೇಳಿ ಬಂದಿದೆ.ಬಿಜೆಪಿಯಿಂದ ಎಂ.ನೀಲಯ್ಯ ಕಣದಲ್ಲಿದ್ದು, ಆಡಳಿತ ಸರ್ಕಾರದ ಅಭ್ಯರ್ಥಿಯಾಗಿರುವ ನನಗೆ ಮತ ನೀಡಿದರೆ ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಪ್ರಚಾರ ಮಾಡಿದ್ದಾರೆ. ಅದು ಕೂಡಾ ಕೆಲಸ ಮಾಡುವ ನಿರೀಕ್ಷೆಯಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರ

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶಶೀಲ್ ನಮೋಶಿ ಆಯ್ಕೆ ಬಯಸಿದ್ದು, ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಳೆದ ಸಲ ಆಯ್ಕೆಯಾದ ಇವರ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಹಾಗೂ ಆಡಳಿತ ಪಕ್ಷದ ಪ್ರಭಾವ ಇರುವುದರಿಂದ ಬಿಜೆಪಿ ಜಯಭೇರಿ ಬಾರಿಸುವ ಸಾಧ್ಯತೆಗಳಿವೆ. ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಬಿರುಸಿನ ಚುನಾವಣೆ ಆರಂಭವಾಗಿದ್ದು, ಬಿಜೆಪಿಯಿಂದ ಕೋಟಿ ಶ್ರೀನಿವಾಸ ಪೂಜಾರಿ ಸ್ಪರ್ಧಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X