ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೃಷ್ಣ, ಅಂಬಿಗೆ ಕೊಕ್

By Staff
|
Google Oneindia Kannada News

NO ticket for rebel starನವದೆಹಲಿ,ಏ.20:ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾದಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಎಸ್ .ಎಂ ಕೃಷ್ಣ ಸೇರಿದಂತೆ ಹಲವು ಹಿರಿಯರ ನಾಯಕರನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸೇರಿಸದೇ ಅಚ್ಚರಿ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಸಂಸದ ಅಂಬರೀಷ್, ನಟ ಜಗ್ಗೇಶ್, ಎಚ್ .ಎಂ. ರೇವಣ್ಣ, ಪೊಲೀಸ್ ಆಧಿಕಾರಿ ಬಿ.ಕೆ. ಶಿವರಾಂ, ಚಾಮರಾಜಪೇಟೆ ಆರ್ .ವಿ.ದೇವರಾಜ್ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಸಿದ್ಧರಾಮಯ್ಯ ವರುಣಾ ಕ್ಷೇತ್ರದಿಂದ, ಮದ್ದೂರಿನಿಂದ ಡಿ.ಸಿ .ತಮ್ಮಣ್ಣ, ಕೃಷ್ಣರಾಜನಗರದಿಂದ ಎಚ್. ವಿಶ್ವನಾಥ್ ಹಾಗೂ ಕನಕಪುರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧಿಸುತ್ತಿದ್ದಾರೆ. ಒಟ್ಟು 89 ಕ್ಷೇತ್ರಗಳ ಪೈಕಿ ಈಗ ಕಾಂಗ್ರೆಸ್ ಕೇವಲ 5 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಅವುಗಳೆಂದರೆ ಚಿಕ್ಕಪೇಟೆ, ರಾಮನಗರ, ವಿಜಯನಗರ, ತುಮಕೂರು(ಗ್ರಾ), ಚಿಕ್ಕನಾಯಕನಹಳ್ಳಿ,

ಅಭ್ಯರ್ಥಿಗಳ ಬದಲಾದ ಕ್ಷೇತ್ರ:
ಯುವಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ಕೋಲಾರದಿಂದ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರಕ್ಕೆ ಬಂದಿದ್ದಾರೆ. ರೋಶನ್ ಬೇಗ್ ಹೆಬ್ಬಾಳದಿಂದ ಶಿವಾಜಿನಗರ, ಬಿನ್ನಿಪೇಟೆಯಿಂದ ವಿ.ಸೋಮಣ್ಣ ಗೋವಿಂದರಾಜನಗರ, ಜಿ. ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಹಿಳೆಯರ ಪೈಕಿ ವಾಸಂತಿ ಶಿವಣ್ಣ, ರಾಣಿ ಸತೀಶ್ ಅವರನ್ನು ಹಿಂದಿಕ್ಕಿ ಮಾಜಿ ಕಾರ್ಪೋರೇಟ್ ಜಿ.ಪದ್ಮಾವತಿ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಮಹಾಲಕ್ಷ್ಮೀ ಲೇಔಟ್ ನಿಂದ ನೆ.ಲ. ನರೇಂದ್ರಬಾಬು, ಬಸವನಗುಡಿಯಿಂದ ಕೆ. ಚಂದ್ರಶೇಖರ್, ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಬಿಟಿಎಂಲೇಔಟ್ ನಿಂದ ರಾಮಲಿಂಗಾ ರೆಡ್ಡಿ, ಮಲ್ಲೇಶ್ವರದಿಂದಎಂ.ಆರ್. ಸೀತಾರಾಂ ಎಂದಿನಂತೆ ಸ್ಪರ್ಧಿಸಲಿದ್ದಾರೆ. ರಿಯಲ್ ಎಸ್ಟೇಟ್ ಧಣಿಗಳಾದ ಕೆ.ಎಸ್. ಸಮೀವುಲ್ಲಾ ಹಾಗೂ ಕುಪ್ಪೇಂದ್ರ ರೆಡ್ಡಿ ಸ್ಥಾನ ಪಡೆದು ಇತರರಿಗೆ ಇರಸು ಮುರುಸಾಗುವಂತೆ ಮಾಡಿದ್ದಾರೆ.

ಈ ಬಾರಿ ಟಿಕೆಟ್ ಕೈ ತಪ್ಪಿದ್ದರಿಂದ ಕುಪಿತಗೊಂಡಿರುವ ಮಾಜಿ ಶಾಸಕ ಶಿವರಾಮೇಗೌಡರ ಬಣ ಸಾಮೂಹಿಕ ರಾಜೀನಾಮೆಗೆ ಮುಂದಾಗಿದೆ. ಜಗ್ಗೇಶ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅಂಬರೀಷ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

(ದಟ್ಸ್ ಕನ್ನಡವಾರ್ತೆ)
ಸಿದ್ದು ಅಸಮಾಧಾನ; ಕಾಂಗ್ರೆಸ್ ಪಟ್ಟಿ ಪ್ರಕಟ ವಿಳಂಬ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X