ನೊಕಿಯಾಗೆ ಭಾರತದಲ್ಲಿ ಬೊಂಬಾಟ್ ಬಿಸಿನೆಸ್ಸು
ನ್ಯೂಯಾರ್ಕ್, ಮಾ. 24 : ಮೊಬೈಲ್ ಫೋನ್ ಕಂಪನಿಗಳ ಮುಂದಾಳು ನೊಕಿಯಾಗೆ ಕಳೆದ ವರ್ಷ ಸಖತ್ ವ್ಯಾಪಾರ ಆಗಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಪ್ರಪಂಚದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವುದರಿಂದ ನೊಕಿಯಾಗೆ ಬಿಸಿನೆಸ್ ಜಾಸ್ತಿಯಾಗಿರುವುದರಲ್ಲಿ ಅಂಥದೇನೂ ಆಶ್ಚರ್ಯವಿಲ್ಲ. 2007ರಲ್ಲಿ ನೊಕಿಯಾದ ಭಾರತೀಯ ಮಾರಾಟದ ಒಟ್ಟು ಮೊತ್ತ 51,058 ದಶಲಕ್ಷ ಯೂರೋಗಳಾಗಿವೆ.
ಭಾರತದಲ್ಲಿ ನೊಕಿಯಾ ಮಾರಾಟ ಕಳೆದ ವರ್ಷ ಶೇಕಡಾ 36ರಷ್ಟು ಹೆಚ್ಚಾಗಿದೆ. ನಮ್ಮ ದೇಶದ ಮೊಬೈಲ್ ಬಳಕೆದಾರರು ಒಟ್ಟು 3,684 ಯೂರೋ ವ್ಯಾಪಾರವನ್ನು ನೊಕಿಯಾ ಕಂಪನಿಗೆ ತಂದುಕೊಟ್ಟಿದ್ದಾರೆ. 2006ರಲ್ಲಿ ನೊಕಿಯಾ ಕಂಪನಿಯ ವ್ಯಾಪಾರ ವಹಿವಾಟು ಭಾರತದಲ್ಲಿ 2,713 ಯೂರೋ ಇತ್ತು. ಚೀನಾ ಹೊರತುಪಡಿಸಿದರೆ ನೊಕಿಯಾಗೆ ಒಳ್ಳೆ ವ್ಯಾಪಾರ ತಂದುಕೊಡುತ್ತಿರುವ ದೇಶವೆಂದರೆ ಭಾರತ. ಅಮೆರಿಕಾ ಜರ್ಮನಿ ಗ್ರೇಟ್ ಬ್ರಿಟನ್ ಮುಂತಾದ ದೇಶಗಳೆಲ್ಲ ಹಿಂದೆ ಹಿಂದೆ.
( ಏಜೆನ್ಸೀಸ್ )
ಪೂರಕ ಮಾಹಿತಿಗೆ: ವಿಡಿಯೋ: ನೋಕಿಯಾ ಮೊಬೈಲ್ ದಾಖಲೆ ಮಾರಾಟ












Click it and Unblock the Notifications