ಆಕಾಶವಾಣಿಯ ವಾಚಕ ಬಸಪ್ಪ ಮಾದಾರ ವಿಧಿವಶ
ಬೆಂಗಳೂರು, ಜ.21:ಬೆಂಗಳೂರು ಆಕಾಶವಾಣಿ ಕೆಂದ್ರದಲ್ಲಿ ವಾರ್ತಾ ವಾಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಸಪ್ಪ ಬಿ. ಮಾದರ ನಿಧನರಾಗಿದ್ದಾರೆ. ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದ ಅವರಿಗೆ 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರಿ ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ.
ಆಕಾಶವಾಣಿ ..ವಾರ್ತೆಗಳು..ಓದುತ್ತಿರುವವರು ಬಸಪ್ಪ ಮಾದರ ಎಂದು ಶುರು ಮಾಡುತ್ತಿದ್ದ ವಾರ್ತಾ ವಾಚನವನ್ನು ರೇಡಿಯೋ ದಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರ ಬಲ್ಲವರೆಲ್ಲರಿಗೂ ಚಿರಪರಿಚಿತವಾಗಿತ್ತು.
ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡಿನ ಮೂಲಕ ರಸವಾರ್ತೆಗೆ ಹೊಸ ಕಳೆಯನ್ನು ತಂದುಕೊಟ್ಟಿದ್ದ ಕೀರ್ತಿ ಇವರದಾಗಿತ್ತು.ಬಸಪ್ಪ ಮಾದರ ಅವರ ಅಂತ್ಯಕ್ರಿಯೆ ಸೋಮವಾರ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲಿ ನಡೆಯಲಿದೆ. ಬಸಪ್ಪ ಅವರ ನಿಧನಕ್ಕೆ ಆಕಾಶವಾಣಿವಾಣಿ ಸಿಬ್ಬಂದಿ ವರ್ಗ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
(ಏಜನ್ಸೀಸ್ )












Click it and Unblock the Notifications