ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್ ಕುಂಬ್ಳೆ 600 ವಿಕೆಟ್‌ಗಳ ಸರದಾರ

By Staff
|
Google Oneindia Kannada News

ಜಂಬೋ 600 ವಿಕೆಟ್‌ಗಳ ಸರದಾರಪರ್ಥ್, ಜ.17 : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆಂಡ್ರ್ಯೂ ಸಿಮಂಡ್ಸ್ ವಿಕೆಟ್ ಕಬಳಿಸುವುದರ ಮುಖಾಂತರ 'ಜಂಬೋ' ಅನಿಲ್ ಕುಂಬ್ಳೆ 600 ವಿಕೆಟ್ ಪಡೆದವರ ಗುಂಪಿಗೆ ಮೂರನೆಯವರಾಗಿ ಸೇರ್ಪಡೆಯಾಗಿದ್ದಾರೆ.

ದಿನದಾಟದ ನಂತರ ಮಾತನಾಡುತ್ತಿದ್ದ ಕುಂಬ್ಳೆ, ಕ್ರಿಕೆಟ್ ಪಂಡಿತರ ಟೀಕೆಗಳೇ ತಮ್ಮ ಸಾಧನೆಗೆ ಸ್ಫೂರ್ತಿ. ಕರಿಯರ್ ಪ್ರಾರಂಭಿಸಿದಾಗ ಈ ಅಂಕಿಅಂಶಗಳ ಬಗ್ಗೆ ಲಕ್ಷ್ಯವಿರದಿದ್ದರೂ ಈ ಸಾಧನೆ ಸಂತಸ ತಂದಿದೆ. ಇದು ದೊಡ್ಡ ಸಂಖ್ಯೆಯೇ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳ ಮನದಲ್ಲಿ ಮುಂದಿನ ಚೆಂಡಿನ ಬಗ್ಗೆ ಚಿಂತೆ ಹುಟ್ಟುವಂತೆ ಮಾಡುತ್ತಿರುವುದೇ ತಮ್ಮ ಯಶಸ್ಸಿಗೆ ದಾರಿಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

723 ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ ಮತ್ತು 708 ವಿಕೆಟ್ ಗಳಿಸಿರುವ ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ಅವರ ಮಾತ್ರ ಕುಂಬ್ಳೆಗಿಂತ ಹೆಚ್ಚಿನ ವಿಕೆಟ್ ಗಳಿಸಿದ್ದಾರೆ. 434 ವಿಕೆಟ್ ಪಡೆದಿರುವ ಕಪಿಲ್ ಭಾರತದ ಪರ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ. ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಆಟಗಾರರಲ್ಲಿ 331 ವಿಕೆಟ್ ಪಡೆದಿರುವ ಶ್ರೀಲಂಕಾದ ಚಮಿಂಡ ವಾಸ್ ಅವರು ಕುಂಬ್ಳೆ ಹಿಂದಿದ್ದಾರೆ. ಕುಂಬ್ಳೆಯವರ ದಾಖಲೆಯನ್ನು ದಾಟಲು ದಶಕಗಳೇ ಬೇಕಾಗಬಹುದೇನೋ?

124ನೇ ಟೆಸ್ಟ್ ಆಡುತ್ತಿರುವ 37 ವರ್ಷದ ಕುಂಬ್ಳೆ ಸ್ಲಿಪ್‌ನಲ್ಲಿ ಸಿಮಂಡ್ಸ್ ಬ್ಯಾಟಿನಿಂದ ಸಿಡಿದ ಚೆಂಡು ಧೋನಿ ಕೈಸವರಿ ದ್ರಾವಿಡ್ ಕೈಸೇರುತ್ತಿದ್ದಂತೆ ಎಲ್ಲ ಆಟಗಾರರಿಂದ ಅಪೀಲು ಮುಗಿಲು ಮುಟ್ಟಿತ್ತು. ಅಂಪೈರ್ ಅಶದ್ ರೌಫ್ ಸ್ವಲ್ಪ ಸಮಯ ತೆಗೆದುಕೊಂಡು ನಂತರ ಔಟ್ ನೀಡುತ್ತಿದ್ದಂತೆ ಕುಂಬ್ಳೆ ಮೊಗದಲ್ಲಿ ಸಂತಸ ಮತ್ತು ಸಾರ್ಥಕತೆಯ ನಗೆ ಮೂಡಿತ್ತು. ಎಲ್ಲ ಆಟಗಾರರು ಕುಂಬ್ಳೆಯನ್ನು ಮುತ್ತಿಕೊಂಡು ಅಭಿನಂದಿಸಿದರು. ಆಸ್ಟ್ರೇಲಿಯಾದ ಉಪನಾಯಕ ಆಂಡಂ ಗಿಲ್‌ಕ್ರಿಸ್ಟ್ ಕೂಡ ಹಸ್ತಲಾಘವ ಮಾಡಿ ಅಭಿನಂದಿಸಿದರು.

ವೇಗದ ದಾಳಿಗೆ ಆಸೀಸ್ ನಜ್ಜುಗುಜ್ಜು : ಪುಟಿದೇಳುವ ಪಿಚ್‌ ಮೇಲೆ ಭಾರತದ ವೇಗದ ದಾಳಿಯ ಮುಂದೆ ಆಸ್ಟ್ರೇಲಿಯಾದ ಆಟಗಾರರ ಬಳಿ ಯಾವುದೇ ಉತ್ತರವಿರಲಿಲ್ಲ. ಕೇವಲ 212 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ಗಳ ಮುನ್ನಡೆ ಸಾಧಿಸಿದೆ.

ಹರಭಜನ್ ಸಿಂಗ್ ಬದಲಿಗೆ ಮೈದಾನಕ್ಕಿಳಿದಿದ್ದ ಇರ್ಫಾನ್ ಪಠಾಣ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ಎರಡು ವಿಕೆಟ್ ಕಬಳಿಸಿ ಆಸ್ಟ್ರೇಲಿಯನ್ನರಿಗೆ ಭಾರೀ ಆಘಾತ ನೀಡಿದರು. ಕೇವಲ 61 ರನ್‌ಗಳಿಗೆ 5 ವಿಕೆಟ್ ಕಿತ್ತು ಮೇಲುಗೈ ಸಾಧಿಸಿತ್ತು. ಮಧ್ಯ ಕ್ರಮಾಂಕದಲ್ಲಿ ಸಿಮಂಡ್ಸ್ ಮತ್ತು ಗಿಲ್‌ಕ್ರಿಸ್ಟ್ ನಡುವಿನ 102 ರನ್ ಜೊತೆಯಾಟ ಚೇತರಿಕೆ ನೀಡಿದರೂ ಬಾಲಂಗೋಚಿಗಳು ಯಾವುದೇ ಪ್ರತಿರೋಧ ಒಡ್ಡಲಿಲ್ಲ.

ಭಾರತದ ಪರ ಆರ್.ಪಿ.ಸಿಂಗ್ ನಾಲ್ಕು ವಿಕೆಟ್ ಪಡೆದರೆ ಕುಂಬ್ಳೆ, ಇಶಾಂತ್ ಶರ್ಮಾ ಮತ್ತು ಪಠಾಣ್ ತಲಾ ಎರಡು ವಿಕೆಟ್ ಕಿತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜಾಫರ್ ವಿಕೆಟ್ ಕಳೆದುಕೊಂಡು ಭಾರತ 52 ರನ್ ಗಳಿಸಿ ಒಟ್ಟು 170 ರನ್ ಮುನ್ನಡೆ ಸಾಧಿಸಿದೆ.

(ಏಜನ್ಸೀಸ್)

ಪೂರಕ ಓದಿಗೆ
ಕುಂಬ್ಳೆಯಲ್ಲೊಬ್ಬ ಅಪರೂಪದ ಕಲಾವಿದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X