ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೇಷ್ಠ ಯುವ ರಾಜಕಾರಣಿ ಪ್ರಶಸ್ತಿ:ಯಾರಿಗಪ್ಪಾ ಅದು?

By Staff
|
Google Oneindia Kannada News

ಬೆಂಗಳೂರು, ಜನವರಿ 3: ಎಸ್ಸೆಲ್ ಮತ್ತು ಜೀ ಕನ್ನಡ ಸಹಯೋಗದೊಂದಿಗೆ ಕಳೆದ ಒಂದು ವರ್ಷದಿಂದ ನೀಡುತ್ತಿರುವ "ಎಸ್ಸೆಲ್ ಕರ್ನಾಟಕ ಶ್ರೇಷ್ಠ ಪ್ರಶಸ್ತಿ" ಸರಣಿಯಲ್ಲಿ ಮತ್ತೊಂದು "ಕರ್ನಾಟಕ ಶ್ರೇಷ್ಠ ಯುವ ರಾಜಕಾರಣಿ ಪ್ರಶಸ್ತಿ". ನಿವೃತ್ತ ನ್ಯಾಯಮೂರ್ತಿ ಎಚ್. ರಂಗವಿಠ್ಠಲಾಚಾರ್ ನೇತೃತ್ವದ ಆಯ್ಕೆ ಸಮಿತಿಯು ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿಯ ಐದು ಮಂದಿ ಯುವ ರಾಜಕರಣಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿದೆ. ಸಾರ್ವಜನಿಕರು ಎಸ್ಸೆಮ್ಮೆಸ್ ಹಾಗೂ ದೂರವಾಣಿ ಮೂಲಕ ಮತ ಚಲಾಯಿಸಿ "ಕರ್ನಾಟಕ ಶ್ರೇಷ್ಠ ಪ್ರಶಸ್ತಿ"ಗೆ ಈ ಐವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದಾಗಿದೆ.

1) ಕೆ. ಚಂದ್ರಶೇಖರ್, ಮಾಜಿ ಶಾಸಕರು, ಬಸವನಗುಡಿ, ಬೆಂಗಳೂರು: (SMS CHANDRU to 57575 or dial 186-2424-7575-40 from your BSNL landline).

2) ಟಿ.ಕೃಷ್ಣ, ಸಮಾಜ ಸೇವಕ, ಅನೇಕಲ್ (SMS KRISHNA to 57575 or dial 186-2424-7575-41 from your BSNL landline).

3) ಡಾ. ಪೂರ್ಣಿಮಾ ಅಶೋಕ್ ಗೌರೊಜಿ, ಸಮಾಜ ಸೇವಕಿ, ರಾಮದುರ್ಗ, ಬೆಳಗಾಂ (SMS POORNIMA to 57575 or dial 186-2424-7575-42 from your BSNL landline).

4) ಎನ್.ಎಸ್.ರವಿ, ಸಮಾಜ ಸೇವಕ, ಕಾಕ್ಸ್ ಟೌನ್, ಬೆಂಗಳೂರು(SMS RAVI to 57575 or dial 186-2424-7575-43 from your BSNL landline).

5) ಸಲಿಂ ಅಹಮದ್, ಎಂ ಎಲ್ ಸಿ, ಯುವ ಕಾಂಗ್ರೆಸ್ ನಾಯಕ, (SMS SALIM to 57575 or dial 186-2424-7575-44 from your BSNL landline).

6) ಶ್ರೀನಿವಾಸ್. ವಿ .ಮಾನೆ, ಸಮಾಜ ಸೇವಕ, ಧಾರವಾಡ (SMS SRINIVAS to 57575 or dial 186-2424-7575-45 from your BSNL landline).

"ಎಸ್ಸೆಲ್ ಗ್ರೂಪ್ ಕರ್ನಾಟಕ ಶ್ರೇಷ್ಠ ಪ್ರಶಸ್ತಿ ಸರಣಿ ಪ್ರಾರಂಭಿಸಿ ಒಂದು ವರ್ಷ ಕಳೆದದ್ದು ಸಂತಸ ತಂದಿದೆ ಈ ಸಂದರ್ಭದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಸಮಾಜದ ಏಳಿಗೆಗೆ ಶ್ರಮಿಸಿದ ಭವಿಷ್ಯದ ನಾಯಕರುಗಳೆಂದೇ ಗುರುತಿಸಲ್ಪಡುವ ಯುವ ನಾಯಕರುಗಳನ್ನು ಗೌರವಿಸುವ ಆಶಯ ನಮ್ಮದು." ಎಂದು ಎಸ್ಸೆಲ್ ಗ್ರೂಪ್ ಮತ್ತು ಜೀ ನೆಟ್‌ವರ್ಕ್‌ನ ಉಪಾಧ್ಯಕ್ಷ ಡಾ.ಎಂ.ಗೌತಮ್ ಮಾಚಯ್ಯ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎಚ್. ರಂಗವಿಠ್ಠಲಾಚಾರ್ ನೇತೃತ್ವದ ಗಣ್ಯರ ಸಮಿತಿಯಲ್ಲಿ ಸೀತಾಲಕ್ಶ್ಮಿ ಎಸ್, (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರ್ತಿ), ಆರ್.ಕೆ.ಮಟ್ಟು (ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್) ಎಂ ರಘುಪತಿ (ಮಾಜಿ ಶಿಕ್ಷಣ ಸಚಿವ) ಬಿ. ಸೋಮಶೇಖರ್, (ಅಧ್ಯಕ್ಷರು, ಜನತಾದಳ(ಯು)) ಆರ್.ಪಿ. ಜಗದೀಶ್, (ನಿವೃತ್ತ ಸಂಪಾದಕರು, ಪ್ರಜಾವಾಣಿ) ಗಾಯತ್ರಿ ನಿವಾಸ್ (ಸುದ್ದಿ ಸಂಪಾದಕರು ಡೆಕ್ಕನ್ ಹೆರಾಲ್ಡ್) ಇವರು ಸದಸ್ಯರಾಗಿದ್ದರು. "ಕರ್ನಾಟಕ ಶ್ರೇಷ್ಠ ಯುವ ರಾಜಕಾರಣಿ ಪ್ರಶಸ್ತಿ" ಪ್ರದಾನ ಸಮಾರಂಭವು ಇದೇ ಜನವರಿ 19ರಂದು ನಡೆಯಲಿದೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X